ಅಸ್ತಾನಾ (ಕಜಕಸ್ತಾನ): ಹಿತೇಶ್ ಗುಲಿಯಾ ಮತ್ತು ಸಾಕ್ಷಿ ಅವರು ವಿಶ್ವ ಬಾಕ್ಸಿಂಗ್ ಕಪ್ ಕೂಟದಲ್ಲಿ ಸೆಮಿಫೈನಲ್ ತಲುಪುವ ಮೂಲಕ ಭಾರತಕ್ಕೆ ಇನ್ನೆರಡು ಪದಕ ಖಚಿತಪಡಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಬ್ರೆಜಿಲ್ ಲೆಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿತೇಶ್, ಪುರುಷರ 70 ಕೆ.ಜಿ. ವಿಭಾಗ ಕ್ವಾರ್ಟರ್‌ಫೈಲ್‌ನಲ್ಲಿ ಕಜಕಸ್ತಾನದ ಅಲ್ಮಾಝ್ ಒರೊಝ್‌ಬೆಕೋವ್ ಅವರನ್ನು 5–0 ಯಿಂದ ಸುಲಭವಾಗಿ ಸೋಲಿಸಿದರು.
ಮಹಿಳೆಯರ 54 ಕೆ.ಜಿ. ಸ್ಪರ್ಧೆಯಲ್ಲಿ ಸಾಕ್ಷಿ ಏಕಾಗ್ರಚಿತ್ತದಿಂದ ಹೋರಾಡಿ ಬ್ರೆಜಿಲ್‌ನ ತಾತ್ಯಾನಾ ರೆಜಿನಾ ಡಿ ಜೀಸಸ್ ಅವರನ್ನು ಸರ್ವಾನುಮತದ ತೀರ್ಪಿನಲ್ಲಿ ಮಣಿಸಿ ಅಂತಿಮ ನಾಲ್ಕರ ಘಟ್ಟ ತಲುಪಿದರು.
ಮೀನಾಕ್ಷಿ (48 ಕೆ.ಜಿ), ಪೂಜಾರಾಣಿ (80 ಕೆ.ಜಿ), ಸಂಜು (60 ಕೆ.ಜಿ) ಅವರು ಬುಧವಾರವೇ ಸೆಮಿಫೈನಲ್ ತಲುಪಿ ಪದಕ ಖಚಿತಪಡಿಸಿಕೊಂಡಿದ್ದರು.
51 ಕೆ.ಜಿ. ವಿಭಾಗದಲ್ಲಿ ಅನಾಮಿಕಾ ಅವರು ಕ್ವಾರ್ಟರ್‌ಫೈನಲ್ ತಲುಪಿದ್ದು, ಪದಕದ ಹಾದಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.