ADVERTISEMENT

ವಿಶ್ವಕಪ್‌ ಚೆಸ್ ಟೂರ್ನಿ: ಸೆಮಿಫೈನಲ್‌ಗೆ ಕಾರ್ಲ್‌ಸನ್‌

ಚೆಸ್‌ ವಿಶ್ವಕಪ್‌: ಗುಕೇಶ್‌, ವಿದಿತ್‌ ನಿರ್ಗಮನ

ಪಿಟಿಐ
Published 16 ಆಗಸ್ಟ್ 2023, 20:04 IST
Last Updated 16 ಆಗಸ್ಟ್ 2023, 20:04 IST
   

ಬಾಕು (ಅಜರ್‌ಬೈಜಾನ್‌): ಭಾರತದ ಡಿ.ಗುಕೇಶ್ ಜೊತೆ ವಿಶ್ವಕಪ್‌ ಚೆಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನ ಎರಡನೇ ಪಂದ್ಯವನ್ನು ಬುಧವಾರ ‘ಡ್ರಾ’ ಮಾಡಿಕೊಳ್ಳುವಲ್ಲಿ ಯಶಸ್ವಿ ಆದ ಮಾಜಿ ವಿಶ್ವ ಚಾಂಪಿಯನ್‌ ಮಾಗ್ನಸ್ ಕಾರ್ಲ್‌ಸನ್ ಅವರು 1.5–0.5 ಅಂತರದ ಗೆಲುವಿನೊಡನೆ ಸೆಮಿಫೈನಲ್‌ ತಲುಪಿಸಿದರು.

ಮಂಗಳವಾರ ಕಪ್ಪುಕಾಯಿಗಳಲ್ಲಿ ಆಡಿದ ಕಾರ್ಲ್‌ಸನ್ ಮೊದಲ ಪಂದ್ಯ ಜಯಿಸಿದ್ದರು. ಭಾರತದ ವಿದಿತ್‌ ಸಂತೋಷ್ ಗುಜರಾತಿ ಕೂಡ ಹೊರಬಿದ್ದರು. ಸ್ಥಳೀಯ ಫೆವರೀಟ್‌ ನಿಜತ್‌ ಅಬಸೋವ್ ಅವರು 1.5–0.5 ಅಂತರದಿಂದ ವಿದಿತ್‌ ಅವರನ್ನು ಸೋಲಿಸಿದರು. ವಿಶ್ವ ಕ್ರಮಾಂಕದಲ್ಲಿ 97ನೇ ಸ್ಥಾನದಲ್ಲಿರುವ ಅಬಸೋವ್ ಈ ಟೂರ್ನಿಯಲ್ಲಿ ‘ಜೈಂಟ್‌ ಕಿಲ್ಲರ್‌’ ಎನಿಸಿದ್ದಾರೆ. ಅನಿಶ್ ಗಿರಿ (ನೆದರ್ಲೆಂಡ್ಸ್‌), ಪೀಟರ್ ಸ್ವಿಡ್ಲರ್‌ ನಂತರ ಈಗ ವಿದಿತ್‌ ಅವರನ್ನೂ ಅಚ್ಚರಿಗೊಳಿಸಿದ್ದಾರೆ.

ಅಬಸೋವ್ ಮುಂದಿನ ಸುತ್ತಿನಲ್ಲಿ ಕಾರ್ಲ್‌ಸನ್ ಅವರನ್ನು ಎದುರಿಸಲಿದ್ದಾರೆ. ಕಾರ್ಲ್‌ಸನ್‌ ಈ ಟೂರ್ನಿಯನ್ನು ಒಮ್ಮೆಯೂ ಗೆದ್ದಿಲ್ಲ.

ADVERTISEMENT

ಪ್ರಜ್ಞಾನಂದ ಆರ್‌. ಅವರು ಭಾರತೀಯರೇ ಇದ್ದ ಇನ್ನೊಂದು ಕ್ವಾರ್ಟರ್‌ಫೈನಲ್‌ನ ಎರಡನೇ ಪಂದ್ಯದಲ್ಲಿ ಅರ್ಜುನ್ ಎರಿಗೇಶಿ ಅವರನ್ನು ಸೋಲಿಸಿದರು. ಈಗ ಸ್ಕೋರ್‌ 1–1 ಆಗಿದ್ದು, ಗುರುವಾರ ಇವರಿಬ್ಬರ ನಡುವೆ ರ‍್ಯಾಪಿಡ್ ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.