ADVERTISEMENT

ವಿಶ್ವ ಜೂನಿಯರ್ ಈಜು: ರಾಜ್ಯದ ಐವರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 19:41 IST
Last Updated 1 ಜುಲೈ 2025, 19:41 IST
   

ಬೆಂಗಳೂರು: ಕರ್ನಾಟಕದ ದರ್ಶನ್‌ ಎಸ್‌., ದಕ್ಷಣ್‌ ಎಸ್‌., ದಿನಿಧಿ ದೇಸಿಂಗು, ವಿಹಿತಾ ನಯನಾ ಲೋಕನಾಥನ್ ಮತ್ತು ರುಜುಲಾ ಎಸ್‌. ಅವರು ರುಮೇನಿಯಾದ ಒಟೊಪೆನಿಯಲ್ಲಿ ಆಗಸ್ಟ್‌ 19 ರಿಂದ 24ರವರೆಗೆ ನಡೆಯಲಿರುವ ವಿಶ್ವ ಜೂನಿಯರ್ ಈಜು ಚಾಂಪಿಯನ್‌ಷಿಪ್‌
ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ ಎಂದು ಭಾರತ ಈಜು ಫೆಡರೇಷನ್ ಮಂಗಳವಾರ ಪ್ರಕಟಿಸಿದೆ.

ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದ 78ನೇ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿನ ಪ್ರದರ್ಶನದ ಆಧಾರದಲ್ಲಿ ಈ ಈಜುಪಟುಗಳನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT