ADVERTISEMENT

ವಿಶ್ವ ಚೆಸ್‌: ಡ್ರಾ ಪಂದ್ಯಗಳಲ್ಲಿ ಭಾರತ

ಪಿಟಿಐ
Published 21 ನವೆಂಬರ್ 2022, 12:39 IST
Last Updated 21 ನವೆಂಬರ್ 2022, 12:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೆರುಸಲೆಂ: ವಿಶ್ವ ಟೀಮ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮೊದಲೆರಡು ಸುತ್ತುಗಳಲ್ಲಿ ಡ್ರಾ ಸಾಧಿಸಿದೆ.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಮೊದಲ ಸುತ್ತಿನಲ್ಲಿ ಇಸ್ರೇಲ್ ಎದುರು ಡ್ರಾ ಸಾಧಿಸಿತು. ಎಲ್ಲ ನಾಲ್ಕೂ ಪಂದ್ಯಗಳು ಸಮಬಲದಲ್ಲಿ ಅಂತ್ಯವಾದವು.

ಗ್ರ್ಯಾಂಡ್‌ ಮಾಸ್ಟರ್‌ ವಿದಿತ್ ಗುಜರಾತಿ ಇಸ್ರೇಲ್‌ನ ಮ್ಯಾಕ್ಸಿಂ ರಾಡ್ಸ್‌ಟೇನ್ ವಿರುದ್ಧ 31 ನಡೆಗಳಲ್ಲಿ ಡ್ರಾ ಮಾಡಿಕೊಂಡರು. ನಿಹಾಲ್ ಸರಿನ್‌, ಎಸ್‌,ಪಿ. ಸೇತುರಾಮನ್‌ ಮತ್ತು ಅಭಿಜೀತ್ ಗುಪ್ತಾ ಕೂಡ ಇದೇ ಹಾದಿ ಅನುಸರಿಸಿದರು.

ADVERTISEMENT

ಎರಡನೇ ಸುತ್ತಿನಲ್ಲಿ ಪೋಲೆಂಡ್‌ ಎದುರು ಭಾರತ ಡ್ರಾ ಸಾಧಿಸಿತು. ಮೊದಲ ಪಂದ್ಯದಲ್ಲಿ ಎಸ್‌.ಎಲ್‌. ನಾರಾಯಣನ್‌ ಪೋಲೆಂಡ್‌ನ ಮ್ಯಾಟೆಸ್‌ ಬಾರ್ಟೆಲ್‌ ಎದುರು ಜಯ ಸಾಧಿಸಿದರು. ಆದರೆ ಸೇತುರಾಮನ್ ಅವರು ಇಗರ್‌ ಜಾನಿಕ್ ಎದುರು ಎಡವಿದರು.

ವಿದಿತ್ ಮತ್ತು ಸರಿನ್‌ ಕ್ರಮವಾಗಿ ರಾಡೊಸ್ಲಾವ್‌ ವೊತಾಸೆಕ್‌ ಮತ್ತು ಕ್ಯಾಸ್ಪರ್ ಪಿಯೊರನ್‌ ಎದುರು ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.