ಸಿಟ್‌ಜೆಸ್, ಸ್ಪೇನ್ (ಪಿಟಿಐ): ಚಾಣಾಕ್ಷ ಆಟವಾಡಿದ ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ತಂಡ ವಿಭಾಗದ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಗೆಲುವು ದಾಖಲಿಸಿದರು. ಸೋಮವಾರ ರಾತ್ರಿ ನಡೆದ ಗುಂಪು ಹಂತದ ಎರಡನೇ ಸುತ್ತಿನಲ್ಲಿ 2.5–1.5ರಿಂದ ಸ್ಪೇನ್ ತಂಡವನ್ನು ಮಣಿಸಿದರು.
‘ಎ’ ಗುಂಪಿನ ಮೊದಲ ಸುತ್ತಿನಲ್ಲಿ ಭಾರತ 2–2ರಿಂದ ಅಜರ್‌ಬೈಜಾನ್ ಎದುರು ಡ್ರಾ ಸಾಧಿಸಿತ್ತು.
ಮೊದಲ ಪಂದ್ಯದಲ್ಲಿ ಭಾರತದ ಆರ್. ವೈಶಾಲಿ ಸ್ಪೇನ್‌ನ ಸೆಬ್ರಿನಾ ವೆಗಾ ಗುಟಿರೆಜ್ ಅವರನ್ನು 47 ನಡೆಗಳಲ್ಲಿ ಮಣಿಸಿದರು. ಬಳಿಕ ತಂಡದ ಅಗ್ರ ಕ್ರಮಾಂಕದ ಆಟಗಾರ್ತಿ ದ್ರೋಣವಳ್ಳಿ ಹಾರಿಕಾ ಅವರು ಆ್ಯನಾ ಮ್ಯಾಟ್‌ನಾಜ್ ಅವರೊಂದಿಗೆ ಡ್ರಾ ಸಾಧಿಸಿದರು. ಭಕ್ತಿ ಕುಲಕರ್ಣಿ ಹಾಗೂ ಮೇರಿ ಆ್ಯನ್ ಗೋಮ್ಸ್ ಕೂಡ ಡ್ರಾಕ್ಕೆ ಸಮಾಧಾನಪಟ್ಟರು.
ಭಕ್ತಿ ಅವರು ಮರಿಯಾ ಇಜಾಕ್ವೆರಿ ಎದುರು ಮತ್ತು ಗೋಮ್ಸ್ ಅವರು ಮಾರ್ತಾ ಗಾರ್ಸಿಯಾ ಮಾರ್ಟಿನ್ ವಿರುದ್ಧ ಪಾಯಿಂಟ್ಸ್ ಹಂಚಿಕೊಂಡರು.
ಭಾರತವು ಮುಂದಿನ ಪಂದ್ಯದಲ್ಲಿ ಆರ್ಮೇನಿಯಾ ತಂಡವನ್ನು ಎದುರಿಸಲಿದೆ.
ಎರಡನೇ ಸುತ್ತಿನ ಇನ್ನುಳಿದ ಹಣಾಹಣಿಗಳಲ್ಲಿ ರಷ್ಯಾ 3.5–0.5ರಿಂದ ರಷ್ಯಾ ಎದುರು ಗೆದ್ದರೆ, ಆರ್ಮೇನಿಯಾ 2–2ರಿಂದ ಅಜರ್‌ಬೈಜಾನ್ ತಂಡದೊಂದಿಗೆ ಡ್ರಾ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.