ಝಾಗ್ರೆಬ್ (ಕ್ರೊವೇಷ್ಯಾ): ಭಾರತದ ಪೈಲ್ವಾನರು ಶನಿವಾರ ಇಲ್ಲಿ ಆರಂಭವಾದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ನಿರಾಶಾದಾಯಕ ಆರಂಭ ಮಾಡಿದರು. ಮೊದಲ ದಿನ ನಾಲ್ಕೂ ಮಂದಿ ಕುಸ್ತಿಪಟುಗಳು ಸೋಲನುಭವಿಸಿದರು.
ಪುರುಷರ 61 ಕೆ.ಜಿ. ವಿಭಾಗದಲ್ಲಿ ಉದಿತ್, ಕಿರ್ಗಿಸ್ಥಾನದ ತಯಿರ್ಬೆಕ್ ಯುಲು ಅವರಿಗೆ 0–2 ರಿಂದ ಮಣಿದರು. 70 ಕೆ.ಜಿ. ವಿಭಾಗದಲ್ಲಿ ರೋಹಿತ್ ಸ್ಫೂರ್ತಿಯುತವಾಗಿ ಹೋರಾಡಿದರೂ 4–5 ಅಲ್ಪ ಅಂತರದಲ್ಲಿ ಉಜ್ಬೇಕ್ ಪೈಲ್ವಾನ್ ಬಿಗಿಜಾನ್ ಕುಲ್ದಶೇವ್ ಅವರಿಗೆ ಸೋತರು. ಕುಲ್ದಶೇವ್ ಮುಂದಿನ ಸುತ್ತಿನಲ್ಲಿ ಹೊರಬಿದ್ದ ಕಾರಣ ರೇಪೆಷಾಜ್ ಅವಕಾಶವೂ ರೋಹಿತ್‌ಗೆ ಕೈತಪ್ಪಿತು.
86 ಕೆ.ಜಿ. ವಿಭಾಗದಲ್ಲಿ ಮುಕುಲ್ ದಹಿಯಾ 0–10 ರಿಂದ ಅಮೆರಿಕದ ಝಾಹಿದ್ ವಲೆನ್ಸಿಯಾ ಅವರಿಗೆ ಮಣಿದರು. ಆದರೆ ಝಾಹಿದ್ ನಂತರ ಸೆಮಿಫೈನಲ್‌ಗೆ ಮುನ್ನಡೆದ ಕಾರಣ ಮುಕುಲ್‌ಗೆ ರೆಪೆಷಾಜ್ ಅವಕಾಶ ದೊರಕಿದೆ. ಅವರು ಫೈನಲ್‌ಗೆ ತಲುಪಿದರೆ, ಮುಕುಲ್‌ಗೆ ಪದಕದ ಅವಕಾಶ ಜೀವಂತವಾಗಿರಲಿದೆ.
ಹೆವಿವೇಟ್ (125 ಕೆ.ಜಿ) ವಿಭಾಗದಲ್ಲಿ ವ್ಲಾಗಿಸ್ಲಾವ್ ಬಾಲ್ಕಜೆವ್ ಅವರು ಭಾರತದ ರಜತ್ ರಾಹುಲ್ ಅವರನ್ನು 5–2 ರಿಂದ ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.