ನವದೆಹಲಿ: ಪ್ರತಿಭಟನೆಯಲ್ಲಿರುವ ಭಾರತದ ಪ್ರಮುಖ ಕುಸ್ತಿಪಟುಗಳ ಜೊತೆ ಕಳೆದ ವಾರದ ಕೊನೆಯಲ್ಲಿ ದೆಹಲಿ ಪೊಲೀಸರು ನಡೆದುಕೊಂಡ ರೀತಿಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಖಂಡಿಸಿದೆ. ಇದು ‘ತೀವ್ರ ಕಳವಳಕಾರಿ’ ಎಂದು ಕಟುಶಬ್ದಗಳಲ್ಲಿ ಹೇಳಿಕೆ ನೀಡಿದೆ.
ಜಂತರ್ ಮಂಥರ್‌ನಲ್ಲಿ ಪ್ರತಿಭಟನೆ ವೇಳೆ ಕುಸ್ತಿಪಟುಗಳನ್ನು ವಶಕ್ಕೆ ಪಡೆದ ರೀತಿಯನ್ನು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಕೂಡ ಟೀಕಿಸಿತ್ತು.
ವಾರಾಂತ್ಯದಲ್ಲಿ ಭಾರತದ ಕುಸ್ತಿಪಟುಗಳ ಜೊತೆ ನಡೆದುಕೊಂಡ ರೀತಿ ತುಂಬಾ ಕಳವಳಕಾರಿಯಾಗಿದೆ. ಕುಸ್ತಿಪಟುಗಳು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ಕಾನೂನು ಪ್ರಕಾರ ಕ್ರಿಮಿನಲ್ ವಿಚಾರಣೆ ನಡೆಸಬೇಕು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರಕ್ರಿಯೆಯುದ್ದಕ್ಕೂ ಕುಸ್ತಿಪಟುಗಳ ಸುರಕ್ಷತೆ ಕಡೆ ಹೆಚ್ಚಿನ ಗಮನ ನೀಡಬೇಕು. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಐಒಸಿ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.