ADVERTISEMENT

ಕುಸ್ತಿ ಹಬ್ಬ: ಗದುಗಿನ ಪ್ರೇಮಾಗೆ ಪ್ರಶಸ್ತಿ ಸಂಭ್ರಮ

ಕರ್ನಾಟಕ ಕುಸ್ತಿ ಹಬ್ಬ: ಪ್ರಮುಖರ ಹಣಾಹಣಿ ಇಂದು

ಪ್ರಮೋದ್
Published 24 ಫೆಬ್ರುವರಿ 2020, 19:57 IST
Last Updated 24 ಫೆಬ್ರುವರಿ 2020, 19:57 IST
ಧಾರವಾಡದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಸೋಮವಾರ ರಫೀಕ್‌ (ಕೆಂಪು ಲಂಗೋಟಿ) ಎದುರು ಗೆಲುವು ಪಡೆದ ಅಶೋಕ (ಬಿಳಿ) ಚಿತ್‌ ಮಾಡಿದ ರೀತಿ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ
ಧಾರವಾಡದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಸೋಮವಾರ ರಫೀಕ್‌ (ಕೆಂಪು ಲಂಗೋಟಿ) ಎದುರು ಗೆಲುವು ಪಡೆದ ಅಶೋಕ (ಬಿಳಿ) ಚಿತ್‌ ಮಾಡಿದ ರೀತಿ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ   

ಧಾರವಾಡ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕುಸ್ತಿ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಗದುಗಿನ ಪ್ರೇಮಾ ಹುಚ್ಚಣ್ಣನವರ ಚಿತ್‌ ಮೂಲಕ ಗೆಲುವು ಸಾಧಿಸಿ ಪ್ರಶಸ್ತಿ ಪಡೆದರು.

ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಸೋಮವಾರ ಪ್ರೇಮಾ 53 ಕೆ.ಜಿ. ವಿಭಾಗದ ಪಂದ್ಯದಲ್ಲಿ ಹಳಿಯಾಳದ ಅನಕಾ ಸಿದ್ದಿ ಎದುರು ಜಯ ಪಡೆದರು. ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಗದುಗಿನ ಬಶೀರಾ ತಮ್ಮದೇ ಊರಿನ ಸೋನಿಯಾ ಜಾಧವ ಅವರನ್ನು ಮಣಿಸಿ ಚಾಂಪಿಯನ್‌ ಎನಿಸಿದರು.

ಕರ್ನಾಟಕ ಕಿಶೋರ ಪ್ರಶಸ್ತಿಗಾಗಿ 17 ವರ್ಷದ ಒಳಗಿನವರ ಬಾಲಕರ60 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿದಾವಣಗೆರೆಯ ಸಂಜೀವನ್ ಕೊರವರ ಮತ್ತುಬೆಳಗಾವಿಯ ಎಲ್‌. ಮಹೇಶ ಕುಮಾರ ಫೈನಲ್‌ ತಲುಪಿದ್ದಾರೆ.

ADVERTISEMENT

14 ವರ್ಷದೊಳಗಿನ ಬಾಲಕರ 38 ಕೆಜಿ ವಿಭಾಗದಲ್ಲಿಹಾವೇರಿಯ ಸಚಿನ್ ಗೂಳಮ್ಮನವರ ಹಾಗೂ ಹಳಿಯಾಳದ ಮೈನುದ್ದೀನ ಮಾಳಗಿ,41 ಕೆ.ಜಿ. ವಿಭಾಗದಲ್ಲಿಬಾಗಲಕೋಟೆಯ ನಿಂಗಪ್ಪ ಗೆಣ್ಣನವರ ಹಾಗೂ ಮುಧೋಳದ ಶಿವಾನಂದ ಭೋವಿ‌, 44 ಕೆ.ಜಿ. ವಿಭಾಗದಲ್ಲಿಬಾಗಲಕೋಟೆಯ ವಿಠ್ಠಲ ವೈ ಬಟ್ಟಮುರಿ ದಾವಣಗೆರೆಯ ಪರಶುರಾಮ ವಿ, 48 ಕೆ.ಜಿ. ವಿಭಾಗದಲ್ಲಿದಾವಣಗೆರೆಯ ಮಧುಕುಮಾರ ಎಂ. ಹಾಗೂ ಮಂಜುನಾಥ ಪಿ,52 ಕೆ.ಜಿ. ವಿಭಾಗದಲ್ಲಿಧಾರವಾಡದ ಸಚಿನ್ ವಂದರಗಿ, ಬಾಗಲಕೋಟೆಯ ಆದರ್ಶ ತೋಡದಾರ ಮತ್ತು57 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆಯ ಉಮೇಶ ಶಿರಗುಪ್ಪಿ, ಧಾರವಾಡದ ಯೋಗೇಶಗೌಡ ಕುಂದಗೋಳ ಫೈನಲ್‌ ಪ್ರವೇಶಿಸಿದ್ದಾರೆ.

17 ವರ್ಷದೊಳಗಿನ ಬಾಲಕರ 45 ಕೆ.ಜಿ ವಿಭಾಗದಲ್ಲಿ ಬಾಗಲಕೋಟೆಯ ಲಿಂಗರಾಜ ರಾಜಮಾನೆ, ಉತ್ತರ ಕನ್ನಡದ ಸೂರಜ್ ಸುರೇಶ, 48 ಕೆ.ಜಿ. ವಿಭಾಗದಲ್ಲಿಬೆಳಗಾವಿಯ ಋಷಿಕೇಷ ಎಚ್, ಬಾಗಲಕೋಟೆಯ ಮಲ್ಲಿಕಾರ್ಜುನ ತೋಳಮಟ್ಟಿ, 51 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆಯ ಲೋಹಿತ್ ಕುಮಾರ್ ಹಾಗೂ ಎಸ್ ಎಂ, ಮಂಜುನಾಥ ಎಸ್ ಸಿ. ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.