ADVERTISEMENT

20ರಂದು ಕುಸ್ತಿ ಟ್ರಯಲ್ಸ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:22 IST
Last Updated 17 ಅಕ್ಟೋಬರ್ 2019, 20:22 IST

ಬೆಂಗಳೂರು: ಮುಂಬರುವ ರಾಷ್ಟ್ರೀಯ ಸೀನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಪುರುಷರ ಫ್ರೀಸ್ಟೈಲ್‌ ಮತ್ತು ಗ್ರೀಕೊ ರೋಮನ್‌ ಹಾಗೂ ಮಹಿಳಾ ತಂಡಗಳನ್ನು ಆಯ್ಕೆ ಮಾಡುವ ಸಲುವಾಗಿ ಕರ್ನಾಟಕ ಕುಸ್ತಿ ಸಂಸ್ಥೆಯು ಇದೇ ತಿಂಗಳ 20 ರಂದು ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಟ್ರಯಲ್ಸ್‌ ನಡೆಸಲು ನಿರ್ಧರಿಸಿದೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌, ನವೆಂಬರ್‌ 28ರಿಂದ ಡಿಸೆಂಬರ್‌ 1ರವರೆಗೆ ಪಂಜಾಬ್‌ನ ಜಲಂದರ್‌ನಲ್ಲಿ ನಡೆಯಲಿದೆ.

ಡಬ್ಲ್ಯು.ಎಫ್‌.ಐ ಮತ್ತು ಯು.ಡಬ್ಲ್ಯು.ಡಬ್ಲ್ಯು ನಿಯಮಗಳ ಅನುಸಾರ ಟ್ರಯಲ್ಸ್‌ ನಡೆಸಲಾಗುತ್ತದೆ.

ADVERTISEMENT

ಟ್ರಯಲ್ಸ್‌ ನಡೆಯುವ ವಿಭಾಗಗಳು
ಪುರುಷರ ಫ್ರೀಸ್ಟೈಲ್‌:(57, 61, 65, 70, 74, 79, 86, 92, 97 ಮತ್ತು 125 ಕೆ.ಜಿ).
ಪುರುಷರ ಗ್ರೀಕೊ ರೋಮನ್‌: (55, 60, 63, 67, 72, 77, 82, 87, 97 ಮತ್ತು 130 ಕೆ.ಜಿ).
ಮಹಿಳೆಯರು: (50, 53, 55, 57, 59, 62, 65, 68, 72 ಮತ್ತು 76 ಕೆ.ಜಿ).

ಹೆಚ್ಚಿನ ಮಾಹಿತಿಗೆ ಕೋಚ್‌ಗಳಾದ ರಮೇಶ್‌ (ಮೊ:7019909528) ಮತ್ತು ವಿನೋದ್‌ ಕುಮಾರ್‌ (ಮೊ: 8971388143) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.