ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ಪಿಎಸ್‌ಪಿಬಿಯನ್ನು ಪ್ರತಿನಿಧಿಸಿದ್ದ ಯಶಸ್ವಿನಿ ಅವರು, ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 11–5, 7–11, 6–11, 6–11, 4–11ರಿಂದ ಆರ್‌ಬಿಐನ ದಿಯಾ ಚಿತಳೆ ಎದುರು ಪರಾಭವಗೊಂಡರು. ಮೊದಲ ಗೇಮ್‌ನಲ್ಲಿ ಸಿಕ್ಕ ಮುನ್ನಡೆಯನ್ನು ಗೆಲುವಾಗಿ ಪರಿವರ್ತಿಸುವಲ್ಲಿ ಯಶಸ್ವಿನಿ ಎಡವಿದರು.
ಜಿ. ಸತ್ಯನ್ (ಪಿಎಸ್‌ಪಿಬಿ) ಹಾಗೂ ದಿಯಾ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು.
ಪುರುಷರ ಫೈನಲ್‌ನಲ್ಲಿ ಸತ್ಯನ್ ಅವರು 11–5, 11–8, 11–13, 11–7, 11–9ರಿಂದ ಪಶ್ಚಿಮ ಬಂಗಾಳದ ಅಂಕುರ್ ಭಟ್ಟಾಚಾರ್ಜಿ ಅವರನ್ನು ಮಣಿಸಿದರು. ಮಹಿಳೆಯರ ಪ್ರಶಸ್ತಿ ಸುತ್ತಿನಲ್ಲಿ ದಿಯಾ ಅವರು 11-9, 11-7, 11-9, 11-6ರಿಂದ ಸುತೀರ್ಥ ಮುಖರ್ಜಿ (ಆರ್‌ಎಸ್‌ಪಿಬಿ) ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.