ADVERTISEMENT

ಯುವ ರಾಷ್ಟ್ರೀಯ ಕುಸ್ತಿ: ಕರ್ನಾಟಕಕ್ಕೆ ಐದು ಪದಕ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 13:30 IST
Last Updated 24 ಜೂನ್ 2025, 13:30 IST
ಚಿನ್ನದ ಪದಕ ಗೆದ್ದ ತೈಮ್ಮೆಶಿ ಜಿ.ಎಂ. ಅವರನ್ನು ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅಭಿನಂದಿಸಿದರು.
ಚಿನ್ನದ ಪದಕ ಗೆದ್ದ ತೈಮ್ಮೆಶಿ ಜಿ.ಎಂ. ಅವರನ್ನು ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅಭಿನಂದಿಸಿದರು.   

ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಕುಸ್ತಿಪಟುಗಳು ನಾಗ್ಪುರದಲ್ಲಿ ಈಚೆಗೆ ನಡೆದ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ ಸೇರಿದಂತೆ ಐದು ಪದಕಗಳನ್ನು ಗೆದ್ದಿದ್ದಾರೆ.

ಕರ್ನಾಟಕದ ತೈಮ್ಮೆಶಿ ಜಿ.ಎಂ. ಅವರು ಗ್ರೀಕೊ-ರೋಮನ್ 62 ಕೆ.ಜಿ ವಿಭಾಗದ ಫೈನಲ್‌ನಲ್ಲಿ 6–1ರಿಂದ ಮಹಾರಾಷ್ಟ್ರದ ದರ್ಪ್ನ್ ಚೌಧರಿ ವಿರುದ್ಧ ಗೆದ್ದು, ಚಿನ್ನಕ್ಕೆ ಕೊರಳೊಡ್ಡಿದರು. 

ಮಹಿಳಾ ಕುಸ್ತಿ ವಿಭಾಗದಲ್ಲಿ ಸುಶ್ಮಿತಾ ಕಮ್ಮಾರ್ (36 ಕೆ.ಜಿ) ಬೆಳ್ಳಿ ಪದಕ ಗೆದ್ದರು. ಫ್ರೀಸ್ಟೈಲ್ ಕುಸ್ತಿಯಲ್ಲಿ (52 ಕೆ.ಜಿ) ಮೋಹನ್ ರಾಜ್, ಗ್ರೀಕೊ-ರೋಮನ್ (48 ಕೆ.ಜಿ) ವಿಭಾಗದಲ್ಲಿ ಯಂಕಪ್ಪ ಕೂಡಗಿ, ಮಹಿಳಾ ಕುಸ್ತಿ (50 ಕೆ.ಜಿ) ವಿಭಾಗದಲ್ಲಿ ಪುಷ್ಪಾ ನಾಯಕ್ ಅವರು ಕಂಚಿನ ಪದಕ ಜಯಿಸಿದರು.

ADVERTISEMENT

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಆಶ್ರಯದಲ್ಲಿ ಮಹಾರಾಷ್ಟ್ರ ಕುಸ್ತಿಗಿರಿ ಸಂಘವು ಜೂನ್ 20 ರಿಂದ 22ರವರೆಗೆ ಈ ಟೂರ್ನಿಯನ್ನು ನಾಗ್ಪುರದಲ್ಲಿ ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.