ADVERTISEMENT

ಪ್ರೊ ಕಬಡ್ಡಿ: ಪ್ಯಾಂಥರ್ಸ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 20:45 IST
Last Updated 9 ಡಿಸೆಂಬರ್ 2018, 20:45 IST

ವಿಶಾಖಪಟ್ಟಣ: ದೀಪಕ್ ನಿವಾಸ್ ಹೂಡಾ ಅವರ ಮಿಂಚಿನ ಆಟದಿಂದ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡವು ಭಾನುವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡವು 37–24ರಿಂದ ತಮಿಳ್ ತಲೈವಾಸ್ ವಿರುದ್ಧ ಗೆದ್ದಿತು. ಸುನಿಲ್ ಸಿದ್ಧಗವಳಿ ಅವರು ಟ್ಯಾಕಲ್‌ನಲ್ಲಿ ಐದು ಮತ್ತು ರೇಡಿಂಗ್‌ನಲ್ಲಿ ಒಂದು ಪಾಯಿಂಟ್ ಗಳಿಸಿದರು.

ಆನಂದ್ ಪಾಟೀಲ ಅವರು ರೇಡಿಂಗ್‌ನಲ್ಲಿ ಐದು ಅಂಕ ಪಡೆದರು. ರಕ್ಷಣಾ ವಿಭಾಗದಲ್ಲಿ ಮಿಂಚಿದ ಸಂದೀಪ್ ಧೂಲ್ ಮತ್ತು ಸಂತಾಪಣಸಿವಂ ಅವರು ತಲಾ ಮೂರು ಪಾಯಿಂಟ್‌ಗಳನ್ನು ಪಡೆದು ತಂಡದ ಬಲ ಹೆಚ್ಚಿಸಿದರು. ತಲೈವಾಸ್ ತಂಡದ ಸುಕೇಶ್ ಹೆಗ್ಡೆ ಅವರು ಆರು ಪಾಯಿಂಟ್‌ಗಳನ್ನು ಗಳಿಸಿದರು. ವಿಕ್ಟರ್ ಒಬೆರಾಯ್ ಐದು ಅಂಕ ಗಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.