ADVERTISEMENT

ಬ್ಯಾಡ್ಮಿಂಟನ್ : ಆಯ್ಕೆ ಪ್ರಕ್ರಿಯೆಗೆ ಸೈನಾ ಲಭ್ಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 16:02 IST
Last Updated 27 ಡಿಸೆಂಬರ್ 2022, 16:02 IST
ಸೈನಾ ನೆಹ್ವಾಲ್ 
ಸೈನಾ ನೆಹ್ವಾಲ್    

ನವದೆಹಲಿ (ಪಿಟಿಐ): ಒಲಿಂಪಿಯನ್ ಸೈನಾ ನೆಹ್ವಾಲ್ ಮುಂದಿನ ಫೆಬ್ರುವರಿಯಲ್ಲಿ ನಡೆಯಲಿರುವ ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಲಭ್ಯರಿದ್ದಾರೆ.

ಭಾರತ ತಂಡದ ಆಯ್ಕೆಯನ್ನು ಜ. 2 ಮತ್ತು 3ರಂದು ನಡೆಸಲಾಗುತ್ತಿದ್ದು ಸೈನಾ ಫಿಟ್ ಆಗಿದ್ದಾರೆಂದು ಮೂಲಗಳು ತಿಳಿಸಿವೆ. 14 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗುವುದು.

ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ಅವರಲ್ಲದೇ ಮಾಳವಿಕಾ ಬನ್ಸೊದ್ ಮತ್ತು ಆಕರ್ಷಿ ಕಶ್ಯಪ್ ಅವರನ್ನೂ ಟ್ರಯಲ್ಸ್‌ಗೆ ಆಹ್ವಾನಿಸಲಾಗಿದೆ. ಪುರುಷರ ವಿಭಾಗದಲ್ಲಿ ಅರ್ಜುನ್, ಧ್ರುವ ಕಪಿಲಾ, ಕೃಷ್ಣಪ್ರಸಾದ್ ಗಾರ್ಗ್, ವಿಷ್ಣುವರ್ಧನ ಗೌಡ ಮತ್ತು ಇಶಾನ್ ಭಟ್ನಾಗರ್ ಟ್ರಯಲ್ಸ್ ನೀಡಲಿದ್ದಾರೆ.

ADVERTISEMENT

ರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್, ಎಚ್‌.ಎಸ್. ಪ್ರಣಯ್, ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ನೇರಪ್ರವೇಶ ಗಿಟ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.