ADVERTISEMENT

ಅಲ್ಲಲ್ಲಿ ಉದ್ಯೋಗಾವಕಾಶ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ನೌಕಾಪಡೆ, ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ‌್ಗನೈಜೇಷನ್, ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸೆಲೆಕ್ಷನ್, ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್.
 
ಭಾರತೀಯ ನೌಕಾಪಡೆ

ನೌಕಾಪಡೆಯಲ್ಲಿ 120 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-4-2012.

ಹುದ್ದೆ ಹೆಸರು: ಶಾರ್ಟ್ ಸರ್ವೀಸ್ ಕಮಿಷನ್ಡ್ (ಎಸ್‌ಎಸ್‌ಸಿ) ಆಫೀಸರ್ (ಆರ್ಮಿ ಮೆಡಿಕಲ್)
ಒಟ್ಟು ಹುದ್ದೆ: 120

ವೇತನ ಶ್ರೇಣಿ: ರೂ. 15600-39100.

ವಯೋಮಿತಿ: 45 ವರ್ಷ ದಾಟಿರಬಾರದು.
 
ವಿದ್ಯಾರ್ಹತೆ: ಎಂಬಿಬಿಎಸ್ (ಮೊದಲ ಅಥವಾ ಎರಡನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿರಬೇಕು)

ಅರ್ಜಿ ಶುಲ್ಕ: ರೂ.200.

ಆಯ್ಕೆ ವಿಧಾನ: ಸಂದರ್ಶನ

ವಿಳಾಸ: ಆಫೀಸರ್ ಆಫ್ ದಿ ಡೈರೆಕ್ಟರ್ ಜನರಲ್ ಆರ್ಮ್ಡ ಫೋರ್ಸಸ್ ಮೆಡಿಕಲ್ ಸರ್ವೀಸಸ್ (ಡಿಜಿಎಎಫ್‌ಎಂಎಸ್) ಡಿಜಿ-1ಎ, `ಎಂ~ ಬ್ಲಾಕ್, ಮಿನಿಸ್ಟ್ರಿ ಆಫ್ ಡಿಫೆನ್ಸ್, ನವದೆಹಲಿ-110001
ಹೆಚ್ಚಿನ ಮಾಹಿತಿಗೆ http://indianarmy.nic.in

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ‌್ಗನೈಜೇಷನ್

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ‌್ಗನೈಜೇಷನ್ (ಡಿಆರ್‌ಡಿಒ)ನಲ್ಲಿ 606 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9-4-2012.

ಹುದ್ದೆ ವಿವರ: (1) ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ಎಸ್‌ಟಿಎ-ಬಿ) `ಬಿ~: ಹುದ್ದೆಗಳು-227, (2) ಟೆಕ್ನಿಷಿಯನ್-ಎ (ಟೆಕ್-ಎ): ಹುದ್ದೆಗಳು-119, (3) ಅಸಿಸ್ಟೆಂಟ್ ಹಿಂದಿ: ಹುದ್ದೆಗಳು-19, (4) ಸ್ಟೋರ್ ಅಸಿಸ್ಟೆಂಟ್ `ಎ~ (ಹಿಂದಿ ಟೈಪಿಂಗ್): ಹುದ್ದೆಗಳು-6, (5) ಸ್ಟೋರ್ ಅಸಿಸ್ಟೆಂಟ್ `ಎ~ (ಇಂಗ್ಲಿಷ್ ಟೈಪಿಂಗ್): ಹುದ್ದೆಗಳು-58, (6) ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ `ಎ~ (ಹಿಂದಿ ಟೈಪಿಂಗ್): ಹುದ್ದೆಗಳು: 6, (7) ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ `ಎ~ (ಇಂಗ್ಲಿಷ್ ಟೈಪಿಂಗ್): ಹುದ್ದೆಗಳು: 90, (8) ಸಿವಿಲ್ ಡ್ರೈವರ್ `ಎ~: ಹುದ್ದೆಗಳು-41, (9) ಸೆಕ್ಯೂರಿಟಿ ಅಸಿಸ್ಟೆಂಟ್ `ಎ~: ಹುದ್ದೆಗಳು-14, (10) ಫೈರ್ ಎಂಜಿನ್ ಡ್ರೈವರ್: ಹುದ್ದೆಗಳು-04, (11) ಫೈರ್‌ಮನ್: ಹುದ್ದೆಗ ು-22.
 
ಒಟ್ಟು ಹುದ್ದೆ: 606

ವೇತನ ಶ್ರೇಣಿ: ಮೊದಲ ಮೂರು ಹುದ್ದೆಗಳಿಗೆ (1-3): ರೂ. 9300-34800. ನಂತರದ ಹುದ್ದೆಗಳಿಗೆ (4-11): ರೂ. 5200-20200.

ಅರ್ಜಿ ಶುಲ್ಕ: ರೂ.50

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ವಿಳಾಸ: ಡಿಆರ್‌ಡಿಒ ಎಂಟ್ರಿ ಟೆಸ್ಟ್-2012, ಪೋಸ್ಟ್ ಬಾಕ್ಸ್ ನಂ. 8626, ನವದೆಹಲಿ-110054.

ಹೆಚ್ಚಿನ ಮಾಹಿತಿಗೆ http://drdo.gov.in

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸೆಲೆಕ್ಷನ್

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಪ್ರೊಬೇಷನರಿ ಆಫೀಸರ್ಸ್‌ ಹಾಗೂ ಮ್ಯಾನೇಜ್‌ಮೆಂಟ್ ಟ್ರೈನೀಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು 17-6-2012 ರಂದು ಸಾಮಾನ್ಯ ಲಿಖಿತ ಪರೀಕ್ಷೆ ನಡೆಸಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-3-2012.

ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್ಸ್‌ ಹಾಗೂ ಮ್ಯಾನೇಜ್‌ಮೆಂಟ್ ಟ್ರೈನೀಸ್

ಬ್ಯಾಂಕ್‌ಗಳು:
ಅಲಹಾಬಾದ್ ಬ್ಯಾಂಕ್/ ಆಂಧ್ರಾ ಬ್ಯಾಂಕ್/ ಬ್ಯಾಂಕ್ ಆಫ್ ಬರೋಡ/ ಬ್ಯಾಂಕ್ ಆಫ್ ಇಂಡಿಯಾ/ ಬ್ಯಾಂಕ್ ಆಫ್ ಮಹಾರಾಷ್ಟ್ರ/ ಕೆನರಾ ಬ್ಯಾಂಕ್/ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ/ ಕಾರ್ಪೊರೇಷನ್ ಬ್ಯಾಂಕ್/ ದೇನಾ ಬ್ಯಾಂಕ್/ ಇಂಡಿಯನ್ ಬ್ಯಾಂಕ್/ ಇಂಡಿಯನ್ ಓವರ್‌ಸೀಸ್ ಬ್ಯಾಂಕ್/ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್/ ಪಂಜಾಬ್ ನ್ಯಾಷನಲ್ ಬ್ಯಾಂಕ್/ ಪಂಜಾಬ್ ಅಂಡ್ ಸಿಂದ್ ಬ್ಯಾಂಕ್/ ಸಿಂಡಿಕೇಟ್ ಬ್ಯಾಂಕ್/ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ/ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ/ ಯುಕೊ ಬ್ಯಾಂಕ್/ ವಿಜಯಾ ಬ್ಯಾಂಕ್.

ವಯೋಮಿತಿ: 20 ರಿಂದ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ

ಅರ್ಜಿ ಶುಲ್ಕ:
ರೂ.450.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
ಪರೀಕ್ಷಾ ಕೇಂದ್ರ (ಕರ್ನಾಟಕದ ಅಭ್ಯರ್ಥಿಗಳಿಗೆ): ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ, ಮಂಗಳೂರು ಹಾಗೂ ಮೈಸೂರು
ಹೆಚ್ಚಿನ ಮಾಹಿತಿಗೆ www.ibps.in

ADVERTISEMENT

ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್

ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್ (ಆರ್‌ಆರ್‌ಬಿ)ನಲ್ಲಿ 6449 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9-4-2012.

ಹುದ್ದೆ ಹೆಸರು: 1) ಸೀನಿಯರ್ ಸೆಕ್ಷನ್ ಎಂಜಿನಿಯರ್ಸ್‌: ಒಟ್ಟು ಹುದ್ದೆ-1403
2)  ಜೂನಿಯರ್ ಎಂಜಿನಿಯರ್: ಒಟ್ಟು ಹುದ್ದೆ-4784
3) ಸೀನಿಯರ್ ಪಿ ವೇ ಸೂಪರ್‌ವೈಸರ್: ಒಟ್ಟು ಹುದ್ದೆ-160
4) ಚೀಫ್ ಡಿಪೋ ಮೆಟಿರಿಯಲ್ ಸೂಪರಿಂಟೆಂಡೆಂಟ್: ಒಟ್ಟು ಹುದ್ದೆ-37
5) ಡಿಪೋ ಮೆಟಿರಿಯಲ್ ಸೂಪರಿಂಟೆಂಡೆಂಟ್: ಒಟ್ಟು ಹುದ್ದೆ- 65

ವೇತನ ಶ್ರೇಣಿ: ರೂ. 9300-34800.

ವಯೋಮಿತಿ: 28 ರಿಂದ 35 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ.60.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ವಿಳಾಸ: ದಿ ಮೆಂಬರ್ ಸೆಕ್ರೇಟರಿ, ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್, 18, ಮಿಲ್ಲರ್ಸ್‌ ರಸ್ತೆ, ಬೆಂಗಳೂರು-560 046
ಹೆಚ್ಚಿನ ಮಾಹಿತಿಗೆ www.rrbbbs.gov.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.