ನ್ಯಾಷನಲ್ ಇನ್ಷುರೆನ್ಸ್ ಕಂಪೆನಿ ಲಿಮಿಟೆಡ್
ನ್ಯಾಷನಲ್ ಇನ್ಷುರೆನ್ಸ್ ಕಂಪೆನಿ ಲಿಮಿಟೆಡ್ (ಎನ್‌ಐಸಿ)ನಲ್ಲಿ 345 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-3-2012. ಲಿಖಿತ ಪರೀಕ್ಷೆ: 22-4-2012
ಹುದ್ದೆ ಹೆಸರು: 1) ಅಡ್ಮಿನಿಸ್ಟ್ರೇಟೀವ್ ಆಫೀಸರ್ (ಸ್ಪೆಷಲಿಸ್ಟ್)
ಒಟ್ಟು ಹುದ್ದೆ: 145
ಹುದ್ದೆ ಹೆಸರು: 2) ಅಡ್ಮಿನಿಸ್ಟ್ರೇಟೀವ್ ಆಫೀಸರ್ (ಜನರಲಿಸ್ಟ್)
ಒಟ್ಟು ಹುದ್ದೆ: 200
ವೇತನ ಶ್ರೇಣಿ: ರೂ.17240-32640.
ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಅರ್ಜಿ ಶುಲ್ಕ: ರೂ. 400.
ವಿದ್ಯಾರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ www.nationalinsuranceindia.com
ನ್ಯಾಷನಲ್ ಥರ್ಮಲ್ ಪವರ್ ಲಿಮಿಟೆಡ್
ನ್ಯಾಷನಲ್ ಥರ್ಮಲ್ ಪವರ್ ಲಿಮಿಟೆಡ್ (ಎನ್‌ಟಿಪಿಸಿ)ಯಲ್ಲಿ 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-3-2012.
ಹುದ್ದೆ ಹೆಸರು: ಎಕ್ಸಿಕ್ಯೂಟೀವ್ ಟ್ರೈನೀಸ್
ಒಟ್ಟು ಹುದ್ದೆ: 60 (ಹ್ಯೂಮನ್ ರಿಸೋರ್ಸಸ್ -25, ಫೈನಾನ್ಸ್-35)
ವೇತನ ಶ್ರೇಣಿ: ರೂ.24900-50500.
ವಯೋಮಿತಿ: 29 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಎ) ಶೇಕಡಾ 65 ಅಂಕಗಳೊಂದಿಗೆ ಹ್ಯೂಮನ್ ರಿಸೋರ್ಸ್/ ಇಂಡಸ್ಟ್ರಿಯಲ್ ರಿಲೇಷನ್/ ಪರ್ಸನಲ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ/ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಮಾಸ್ಟರ್ ಇನ್ ಸೋಷಿಯಲ್ ವರ್ಕ್ ಅಥವಾ ಎಂಬಿಎ (ಬಿ), ಸಿಎ/ ಐಸಿಡಬ್ಲ್ಯುಎ
ಅರ್ಜಿ ಶುಲ್ಕ: ರೂ. 500.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
* ಪರೀಕ್ಷಾ ದಿನಾಂಕ: 14-4-2012 ಹಾಗೂ 15-4-2012
ಹೆಚ್ಚಿನ ಮಾಹಿತಿಗೆ www.ntpccareers.net
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್)ನಲ್ಲಿ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-3-2012.
ಹುದ್ದೆ ಹೆಸರು: ಪ್ರೊಸೆಸ್ ಟೆಕ್ನೀಷಿಯನ್ಸ್
ಒಟ್ಟು ಹುದ್ದೆ: 20
ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ವಿಳಾಸ: ದಿ ಸೀನಿಯರ್ ಮ್ಯಾನೇಜರ್ (ಎಚ್‌ಆರ್), ಬಿಪಿಸಿಎಲ್ ಮುಂಬೈ ರಿಫೈನರಿ, ಮಹುಲ್, ಮುಂಬೈ-400074
ಹೆಚ್ಚಿನ ಮಾಹಿತಿಗೆ www.bpclcareers.com
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್)ನಲ್ಲಿ 250 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-3-2012.
ಹುದ್ದೆ ಹೆಸರು: ಎಕ್ಸಿಕ್ಯೂಟೀವ್ ಟ್ರೈನೀಸ್
ಒಟ್ಟು ಹುದ್ದೆ: 250
ವೇತನ ಶ್ರೇಣಿ: ರೂ.15600-39100.
ವಯೋಮಿತಿ: 26 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಬಿಇ /ಬಿಟೆಕ್ /ಬಿಎಸ್ಸಿನಲ್ಲಿ ಎಂಜಿನಿಯರಿಂಗ್ ಪದವಿ (ನಾಲ್ಕು ವರ್ಷದ ಅವಧಿ)
ಅರ್ಜಿ ಶುಲ್ಕ: ರೂ. 250.
ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ
* ಪರೀಕ್ಷಾ ದಿನಾಂಕ: 16-4-2012 ಹಾಗೂ 22-4-2012
ಹೆಚ್ಚಿನ ಮಾಹಿತಿಗೆ www.npcilonline.com
ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್
ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್ (ಡಿಎಂಆರ್‌ಸಿ)ನಲ್ಲಿ 25 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-3-2012.
ಹುದ್ದೆ ಹೆಸರು: ಎಕ್ಸಿಕ್ಯೂಟೀವ್ ಟ್ರೈನೀಸ್
ಒಟ್ಟು ಹುದ್ದೆ: 25
ವೇತನ ಶ್ರೇಣಿ: ರೂ.20600-46500.
ವಯೋಮಿತಿ: 28 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 325
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಲಿಖಿತ ಪರೀಕ್ಷೆ ದಿನಾಂಕ: 13-5-2012
* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು 4-4-2012ರೊಳಗೆ ಪೋಸ್ಟ್ ಮೂಲಕ ಕಳುಹಿಸಬೇಕು.
ವಿಳಾಸ: ಡಿಎಂಆರ್‌ಸಿ ಲಿಮಿಟೆಡ್, ಪೋಸ್ಟ್ ಬ್ಯಾಗ್ 9, ಲೋಧಿ ರಸ್ತೆ ಪೋಸ್ಟ್ ಆಫೀಸ್, ನವದೆಹಲಿ-110003
ಹೆಚ್ಚಿನ ಮಾಹಿತಿಗೆ www.delhimetrorail.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.