ಕೇಂದ್ರ ನಾಗರಿಕ ಸೇವಾ ಆಯೋಗ
ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) 2012ರ ಸೆಪ್ಟೆಂಬರ್ 16ರಂದು ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ಪರೀಕ್ಷೆ ಆಯೋಜಿಸಿದ್ದು, ಅದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2-7-2012.
ಹುದ್ದೆ ವಿವರ:
1) ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್: ಒಟ್ಟು ಹುದ್ದೆ 250. ವಿದ್ಯಾರ್ಹತೆ: ಪದವಿ
2) ನೆವಲ್ ಅಕಾಡೆಮಿ, ಗೋವಾ: ಹುದ್ದೆ 40, ವಿದ್ಯಾರ್ಹತೆ: ಬಿಎಸ್ಸಿ (ಭೌತಶಾಸ್ತ್ರ, ಗಣಿತ)
3) ಏರ್ ಫೋರ್ಸ್ ಅಕಾಡೆಮಿ, ಹೈದರಾಬಾದ್: 32 ಹುದ್ದೆ. ವಿದ್ಯಾರ್ಹತೆ: ಪದವಿ (10+2ನಲ್ಲಿ ಭೌತಶಾಸ್ತ್ರ ಮತ್ತು ಗಣಿತ) ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿ.
4) ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ: (ಪುರುಷರಿಗೆ 175 ಹುದ್ದೆ, ಮಹಿಳೆಯರಿಗೆ 15 ಹುದ್ದೆ.
ವಿದ್ಯಾರ್ಹತೆ: ಪದವಿ
ಅರ್ಜಿ ಶುಲ್ಕ: ರೂ.200
ಮಾಹಿತಿಗೆ www.upsc.gov.in
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎಚ್‌ಎಎಲ್) 52 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-6-2012.
ಹುದ್ದೆ ಹೆಸರು:
1) ಇಂಟರ್‌ಪ್ರಿಟರ್
ಒಟ್ಟು ಹುದ್ದೆ: 2
ವೇತನ ಶ್ರೇಣಿ: ರೂ. 22932.
ಹುದ್ದೆ ಹೆಸರು: 2) ವಾರಂಟಿ ಟೆಕ್ನೀಷಿಯನ್ಸ್
ಒಟ್ಟು ಹುದ್ದೆ: 47
ವೇತನ ಶ್ರೇಣಿ: ರೂ. 9250-27170.
ಹುದ್ದೆ ಹೆಸರು: 3) ಸೀನಿಯರ್ ಮೆಡಿಕಲ್ ಆಫೀಸರ್
ಒಟ್ಟು ಹುದ್ದೆ: 3
ವೇತನ ಶ್ರೇಣಿ: ರೂ. 20600-46500.
ವಿಳಾಸ: ಡೆಪ್ಯುಟಿ ಮ್ಯಾನೇಜರ್ (ಎಚ್‌ಆರ್), ಟಿಎಂ, ರಿಕ್ರೂಟ್‌ವೆುಂಟ್ ಸೆಲ್, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಏವಿಯೋನಿಕ್ಸ್ ಡಿವಿಷನ್, ಬಲಾಂಗರ್, ಹೈದರಾಬಾದ್-500042
ಮಾಹಿತಿಗೆ http://www.hal-india.com/careersnew.asp
ದೆಹಲಿ ಪೊಲೀಸ್
ದೆಹಲಿ ಪೊಲೀಸ್‌ನಲ್ಲಿ 751 ಹುದ್ದೆಗಳನ್ನು (ತಾತ್ಕಾಲಿಕ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-6-2012.
ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಡ್ರೈವರ್)
ಒಟ್ಟು ಹುದ್ದೆ: 751
ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ.
ಅರ್ಜಿ ಶುಲ್ಕ: ರೂ.100
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ಸಂದರ್ಶನ
ವಿಳಾಸ:
ಪೋಸ್ಟ್ ಬಾಕ್ಸ್ ನಂ 8020, ದೆಹಲಿ-110033
ಮಾಹಿತಿಗೆ http://delhipolicerecruitment.nic.in/
ಸಿಐಎಸ್‌ಎಫ್
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್)ನಲ್ಲಿ 693 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-7-2012.
ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಫೈರ್)
ಒಟ್ಟು ಹುದ್ದೆ: 693
ವೇತನ ಶ್ರೇಣಿ: ರೂ. 5200-20200.
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 23 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.50.
ವಿಳಾಸ (ದಕ್ಷಿಣ ವಲಯ): ಡಿಐಜಿ, ಸಿಐಎಸ್‌ಎಓ (ದಕ್ಷಿಣ ವಲಯ), ರಾಜಾಜಿ ಭವನ್, `ಡಿ~ ಬ್ಲಾಕ್, ಬೆಸೆಂಟ್ ನಗರ, ಚೆನ್ನೈ, ತಮಿಳುನಾಡು-600090
ಮಾಹಿತಿಗೆ http://cisf.gov.in/
ಗಡಿ ಭದ್ರತಾ ಪಡೆ
ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) 37 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-6-2012.
ಹುದ್ದೆ ವಿವರ: 1) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಫಾರ್ಮಸಿಸ್ಟ್- ್ವಾಲಿಫೈಡ್) 31 ಹುದ್ದೆ, 2) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಲ್ಯಾಬ್ ಟೆಕ್ನಿಷಿಯನ್) 1 ಹುದ್ದೆ, 3) ಕಾನ್‌ಸ್ಟೆಬಲ್ (ಮಸಾಲ್ಚಿ) 2 ಹುದ್ದೆ, 4) ಕಾನ್‌ಸ್ಟೆಬಲ್ (ಟೇಬಲ್ ಬಾಯ್) 1 ಹುದ್ದೆ, 5) ಕಾನ್‌ಸ್ಟೆಬಲ್ (ಜವಾನ) 2 ಹುದ್ದೆ.
ವೇತನ ಶ್ರೇಣಿ: ರೂ. 5200-20200.
ವಯೋಮಿತಿ: ಮೊದಲ ಎರಡು ಹುದ್ದೆಗಳಿಗೆ: 20ರಿಂದ 30 ವರ್ಷ. ನಂತರದ ಹುದ್ದೆಗಳಿಗೆ: 18-23. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ.
ಅರ್ಜಿ ಶುಲ್ಕ: ರೂ.50
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ
ವಿಳಾಸ: ಫ್ರಾಂಟಿಯರ್ ಹೆಡ್‌ಕ್ವಾಟ್ರಸ್, ಬಿಎಸ್‌ಎಫ್, ಯಲಹಂಕ ಪೋಸ್ಟ್, ಬೆಂಗಳೂರು-560064
ಮಾಹಿತಿಗೆ http://www.bsf.nic.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.