ಮಣಿಪಾಲ್ ಗ್ಲೋಬಲ್ ಎಜುಕೇಶನ್ ಮತ್ತು ಸಿಟಿ ಗಿಲ್ಡ್ಸ್ ಜಂಟಿ ಸಹಭಾಗಿತ್ವದ ವೃತ್ತಿಪರ ತರಬೇತಿ ಕಾರ್ಯಕ್ರಮವೇ `ಇಂಡಿಯಾ ಸ್ಕಿಲ್ಸ್~. ಇದು ವೃತ್ತಿ ಸಂಬಂಧಿ ವಿದ್ಯಾರ್ಹತೆ, ಸಾಮರ್ಥ್ಯ ಮಾಪನ ಮತ್ತು ಸರ್ಟಿಫಿಕೇಷನ್ ಒಳಗೊಂಡಿದೆ. ಮಾರುಕಟ್ಟೆ ಬೇಡಿಕೆಗೆ ತಕ್ಕಂತ ಕಲಿಕೆ ಮತ್ತು ಬೆಳವಣಿಗೆಯ ಅವಕಾಶಗಳನ್ನು ಕಲ್ಪಿಸುತ್ತದೆ.
2009ರಲ್ಲಿ ಪ್ರಾರಂಭಗೊಂಡ ಇಂಡಿಯಾ ಸ್ಕಿಲ್ಸ್ ಸದ್ಯ 15 ರಾಜ್ಯಗಳಲ್ಲಿ 80 ತರಬೇತಿ ಕೇಂದ್ರಗಳ ಮೂಲಕ ವೃತ್ತಿಪರ ತರಬೇತಿ ಒದಗಿಸುತ್ತಿದೆ. ಮುಂದಿನ 5 ವರ್ಷಗಳಲ್ಲಿ 500 ವೃತ್ತಿಪರ ತರಬೇತಿ ಕೇಂದ್ರಗಳ ಮೂಲಕ 10 ಲಕ್ಷ ಜನರಿಗೆ ತರಬೇತಿ, ಸರ್ಟಿಫಿಕೇಟ್ ಪ್ರದಾನ ಮಾಡಿ 30 ಔದ್ಯಮಿಕ ವಲಯಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಿದೆ. ಈ ಕಾರ್ಯದಲ್ಲಿ ಸರ್ಕಾರ, ಉದ್ಯಮ ವಲಯ, ಶಿಕ್ಷಣ ಸಂಸ್ಥೆಗಳು, ಸ್ವರ್ಯ ಸೇವಾ ಸಂಸ್ಥೆಗಳ ಸಹಯೋಗ ಪಡೆಯಲಿದೆ.
ಇಂಡಿಯಾ ಸ್ಕಿಲ್ಸ್ ರಿಟೇಲ್, ಆತಿಥ್ಯ, ಸೆಕ್ಯುರಿಟಿ, ಕೇಶ ಮತ್ತು ಸೌಂದರ್ಯವರ್ಧಕ, ಬ್ಯಾಂಕಿಂಗ್ ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ), ಇಂಗ್ಲಿಷ್ ಭಾಷಾ ತರಬೇತಿ, ನಿರ್ಮಾಣ, ಎಂಜಿನಿಯರಿಂಗ್, ಸರಬರಾಜು ನಿರ್ವಹಣೆ, ಆಟೋ, ಕೃಷಿ, ಜವಳಿ ವಲಯಗಳಲ್ಲಿ 39 ಬಗೆಯ ವೃತ್ತಿ ಶಿಕ್ಷಣ ತರಬೇತಿ ಒದಗಿಸುತ್ತದೆ.
ಅರ್ಹತೆ ಮತ್ತು ಪ್ರವೇಶ:
ಬಿಎಫ್‌ಎಸ್‌ಐ, ರೀಟೇಲ್, ಸ್ವಾಗತ ಕಚೇರಿ, ವೃತ್ತಿಸಂಬಂಧ ಕೌಶಲ್ಯಗಳ ಕಲಿಕೆಗೆ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಮುಗಿಸಿರಬೇಕು. ಕೇಶ ಮತ್ತು ಸೌಂದರ್ಯವರ್ಧಕ, ಆಟೊ, ಎಂಜಿನಿಯರಿಂಗ್ ಸಂಬಂಧಿ ಶಿಕ್ಷಣಗಳಿಗೆ 8ನೇ ತರಗತಿ ಪಾಸ್ ಹಾಗೂ ಇಂಗ್ಲಿಷ್ ಅರ್ಥ ಮಾಡಿಕೊಳ್ಳುವ ಜ್ಞಾನವಿದ್ದರೆ ಸಾಕು.
ಮಾತನಾಡುವ ಇಂಗ್ಲಿಷ್ ಕಲಿಕೆ, ಐಎಸ್‌ಇಎಸ್‌ಒಎಲ್‌ಗೆ ಯಾವುದೇ ವಿದ್ಯಾರ್ಹತೆಯುಳ್ಳವರು ಸೇರ್ಪಡೆಗೊಳ್ಳಬಹುದು.
ಉದ್ಯೋಗಾವಕಾಶ ಕಲ್ಪಿಸಲು ಅದು ಐಸಿಐಸಿಐ, ರಿಲಯನ್ಸ್, ಶಾಪರ್ಸ್ ಸ್ಟಾಪ್, ಅದಾನಿ ಗ್ರೂಪ್, ಅಂಬುಜಾ ಸಿಮೆಂಟ್ಸ್ ಇತ್ಯಾದಿ ಪ್ರಮುಖ ಉದ್ಯಮ ಪ್ರವರ್ತಕರೊಂದಿಗೆ ತರಬೇತಿ ಒಪ್ಪಂದ ಹೊಂದಿದೆ. ವಿವರಗಳಿಗೆ 1800 2666 111 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.