ADVERTISEMENT

ಫ್ರಾಂಕ್‌ಫಿನ್ ಗಗನಸಖಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST
ಫ್ರಾಂಕ್‌ಫಿನ್ ಗಗನಸಖಿ
ಫ್ರಾಂಕ್‌ಫಿನ್ ಗಗನಸಖಿ   

ಇತ್ತೀಚಿನ ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರ ಭಾರೀ ಪ್ರಮಾಣದಲ್ಲಿ ವಿಸ್ತರಣೆಯಾಗುತ್ತಿದೆ. ಹೀಗಾಗಿ ಸಹಜವಾಗಿಯೇ ಈ ಕ್ಷೇತ್ರದಲ್ಲಿ ನುರಿತ ಸಿಬ್ಬಂದಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಗಗನಸಖಿಯರು, ಕ್ಯಾಬಿನ್ ಮತ್ತು ಗ್ರೌಂಡ್ ಸಿಬ್ಬಂದಿಗೆ ಸಾಕಷ್ಟು ಬೇಡಿಕೆಯಿದೆ.

ಈ ಹಿನ್ನೆಲೆಯಲ್ಲಿ ಫ್ರಾಂಕ್‌ಫಿನ್ ಏರ್ ಹೋಸ್ಟೆಸ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯಲ್ಲಿ ಗಗನಸಖಿಯರಿಗೆ ತರಬೇತಿ ನೀಡುವ ಕೇಂದ್ರ ನಡೆಸುತ್ತಿದೆ. ಇಲ್ಲಿ ಕಲಿತ 500 ವಿದ್ಯಾರ್ಥಿಗಳು ದೇಶಿ ಮತ್ತು ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳಲ್ಲಿ  ಕ್ಯಾಬಿನ್ ಹಾಗು ಗ್ರೌಂಡ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದು ಲಿಮ್ಕಾ ದಾಖಲೆ ಸೇರಿದೆ.

`ಫ್ರಾಂಕ್‌ಫಿನ್ ಭಾರತದಲ್ಲಿ ಮಾತ್ರವಲ್ಲದೆ ದುಬೈ, ಮಾರಿಷಸ್ ಹಾಗು ಹಾಂಗ್‌ಕಾಂಗ್‌ನಲ್ಲಿಯೂ ಕೇಂದ್ರ ಹೊಂದಿದೆ. ವಿಮಾನಯಾನ ಕ್ಷೇತ್ರಕ್ಕೆ ಉತ್ತಮ ತರಬೇತಿ ಪಡೆದ ಮತ್ತು ನುರಿತ ಉದ್ಯೋಗಿಗಳನ್ನು ಸಜ್ಜುಗೊಳಿಸುತ್ತಿದೆ~ ಎಂದು ಫ್ರಾಂಕ್‌ಫಿನ್ ಅಧ್ಯಕ್ಷ ಕೆ ಎಸ್ ಕೊಹ್ಲಿ ಹೇಳುತ್ತಾರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.