ADVERTISEMENT

ಬೆಂಕಿ ಕಡ್ಡಿಯ ಜ್ವಾಲೆ

ಮಾಡಿ ನಲಿ ಸರಣಿ– 65

ಪ್ರೊ ಸಿ ಡಿ ಪಾಟೀಲ್
Published 11 ಮೇ 2014, 19:30 IST
Last Updated 11 ಮೇ 2014, 19:30 IST

ಬೇಕಾಗುವ ಸಾಮಗ್ರಿಗಳು: ಮೂರು ಪ್ರನಾಳಗಳು, ಸತುವಿನ ತುಂಡು(Zn),  ಅಮೃತಶಿಲೆಯ  ಚೂರುಗಳು(CaCO3), ಹೈಡ್ರೊ ಕ್ಲೊರಿಕ್ ಆಮ್ಲ (HCl), ಪೊಟ್ಯಾಸಿಯಂ ಕ್ಲೊರೇಟ್(KClO3),  ಬೂದಿ, ಬೆಂಕಿ ಪೆಟ್ಟಿಗೆ,

ವಿಧಾನ: ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ. ಮೊದಲ  ಪ್ರನಾಳದಲ್ಲಿ ಸತುವಿನ ತುಂಡುಗಳನ್ನು ಹಾಗೂ ಎರಡನೆಯದರಲ್ಲಿ  ಅಮೃತಶಿಲೆಯ ಚೂರುಗಳನ್ನು ಹಾಕಿ ಅವಕ್ಕೆ ೫ ಸಿಸಿ ದುರ್ಬಲ ಹೈಡ್ರೊಕ್ಲೊರಿಕ್ ಆಮ್ಲವನ್ನು ಹಾಕಿ. 3ನೇ ಪ್ರನಾಳದಲ್ಲಿ ಸ್ವಲ್ಪ ಪೊಟ್ಯಾಸಿಯಂ ಕ್ಲೊರೇಟನ್ನು ಬೂದಿಯೊಂದಿಗೆ ಬೆರಸಿ ಹಾಕಿ.

ಪ್ರಶ್ನೆ:
1. ಮೊದಲ ಪ್ರನಾಳದ ಬಾಯಿಯನ್ನು ಹೆಬ್ಬೆರಳಿನಿಂದ ಮುಚ್ಚಿ ಜೋರಾಗಿ ಅಲುಗಾಡಿಸಿ. ತಕ್ಷಣ ಅದರ ಬಾಯಿ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿಬಿಟ್ಟು ನೋಡಿ. ಏನಾಯಿತು?

2. ಎರಡನೆಯ ಪ್ರನಾಳದ ಬಾಯಿಯ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿ ಬಿಡಿ. ಏನಾಯಿತು?

3. ಮೂರನೆಯ ಪ್ರನಾಳವನ್ನು ಕಾಯಿಸಿ, ಅನಂತರ ಅದರಲ್ಲಿ ಜ್ವಾಲೆ ರಹಿತ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಬಿಡಿ. ಏನಾಯಿತು? ಯಾಕೆ?

ಉತ್ತರ: 1. ಮೊದಲ ಪ್ರನಾಳದಲ್ಲಿ ಹೈಡ್ರೊಜನ್ ಅನಿಲವು ಬಿಡುಗಡೆ ಯಾಗುತ್ತದೆ. Zn+2 HCl → ZnCl2 + H2 ಹೈಡ್ರೊಜನ್ ದಹನಕಾರಿ ಅನಿಲವಾದ್ದರಿಂದ ಪ್ರನಾಳದ ಬಾಯಿಯ ಹತ್ತಿರ ಉರಿಯುವ ಬೆಂಕಿ ಕಡ್ಡಿ ಹಿಡಿದಾಗ ಸ್ಫೋಟದ ಶಬ್ದ ಬರುತ್ತದೆ.

2. ಎರಡನೆಯ ಪ್ರನಾಳದಲ್ಲಿ ಕಾರ್ಬನ್‌ಡೈಆಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ. CaCO3 + 2 HCl → CaCl2+CO2+H2O.
ಇದು ಬೆಂಕಿಯನ್ನು ಆರಿಸುತ್ತದೆ.

3. ಮೂರನೆಯ ಪ್ರನಾಳದಲ್ಲಿ ಆಕ್ಸಿಜನ್ ಅನಿಲ ಬಿಡುಗಡೆಯಾಗುತ್ತದೆ. ಇದು ದಹನ ಕ್ರಿಯೆಗೆ ಸಹಕಾರಿ. ಆದ್ದರಿಂದ ಬೆಂಕಿ ಕಡ್ಡಿ ಜ್ವಾಲೆಯಾಗಿ ಉರಿಯುತ್ತದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT