ADVERTISEMENT

ವಿದ್ಯಾದೀಪ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯ- ಡೈರೆಕ್ಟ್‌ರೇಟ್ ಆಫ್ ಡಿಸ್ಟನ್ಸ್ ಎಜ್ಯುಕೇಷನ್ (ಎಸ್‌ಎಂಯು-ಡಿಡಿಇ) ಕಾರ್ಯಕ್ರಮದ ಅಡಿ ವ್ಯಾಸಂಗ ಮಾಡುತ್ತಿರುವ 1500 ಪ್ರತಿಭಾವಂತ ವಿದ್ಯಾರ್ಥಿಗಳಿಗೆ `ವಿದ್ಯಾದೀಪ~ ರಾಷ್ಟ್ರೀಯ ಮಟ್ಟದ ಪ್ರತಿಭಾ ಪುರಸ್ಕಾರ ಪ್ರಕಟಿಸಲಾಗಿದೆ.

ವಿಶ್ವವಿದ್ಯಾಲಯದ ಅಡಿ ಎಸ್‌ಎಂಯು-ಡಿಡಿಇ ಓದುತ್ತಿರುವ ವಿದ್ಯಾರ್ಥಿಗಳು ಈ ಕಲಿಕೆಗೆ ಅರ್ಹರಾಗಿರುತ್ತಾರೆ. ಪ್ರತಿಭಾ ಪುರಸ್ಕಾರ ಶೇ.100ರಷ್ಟು ಟ್ಯೂಷನ್ ಶುಲ್ಕವನ್ನು ಒಳಗೊಂಡಿರುತ್ತದೆ. ಈ ಅವಕಾಶವನ್ನು ವಿವಿ ಅಡಿ ಐಟಿ, ಮ್ಯೋನೇಜ್‌ಮೆಂಟ್, ಪತ್ರಿಕೋದ್ಯಮ, ಫ್ಯಾಷನ್, ಹಾಸ್ಪಿಟಾಲಿಟಿ, ಪ್ರವಾಸೋದ್ಯಮ, ಅಲೈಡ್ ಹೆಲ್ತ್, ಬಯೊಟೆಕ್ನಾಲಜಿ ಹಾಗೂ ಬಯೊ ಇನ್‌ಫಾರ್ಮೆಟಿಸ್ ತರಬೇತಿ ಪಡೆಯುತ್ತಿರುವವರು ಪಡೆಯಬಹುದು. 

 ಪ್ರತಿಭಾ ಪುರಸ್ಕಾರ ಪಡೆದ  1500 ವಿದ್ಯಾರ್ಥಿಗಳಲ್ಲಿ 500 ಮಂದಿ  ಈಶಾನ್ಯ ಭಾಗದಲ್ಲಿ ಕಲಿಯುವ ಅವಕಾಶ ಪಡೆಯಲಿದ್ದಾರೆ.

ವೆಬ್‌ಸೈಟ್ ವಿಳಾಸ:http://www.smude.edu.in/Admissions/Pages/Scholarships.aspx

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.