ಬೆಂಗಳೂರು: ಸಿ.ಡಿ. ಅಜಯ್ ಅವರು ಕರ್ನಾಟಕ ಸೀನಿಯರ್ಸ್ ಟೆನಿಸ್ ಆಟಗಾರರ ಸಂಸ್ಥೆಯ (ಸ್ಟೆಪಾಕ್) ಟೂರ್ನಿಯ 35–45ರಿಂದ ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕೆಎಸ್ಎಲ್ಟಿಎ, ಸೆಂಚುರಿ ಕ್ಲಬ್ ಮತ್ತು ಕೆಜಿಎಸ್ ಅಂಗಣದಲ್ಲಿ ಮೂರು ದಿನಗಳ ಕಾಲ ಟೂರ್ನಿ ನಡೆದಿತ್ತು. ಫೈನಲ್ನಲ್ಲಿ ಅಜಯ್6-4, 6-0ರಿಂದ ಅರುಣ್ ಕುಮಾರ್ ಅವರನ್ನು ಸೋಲಿಸಿದರು.
ಜಿ. ರಮೇಶ್ ಅರು 46–55 ವರ್ಷದೊಳಗಿನವರ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸಿಂಗಲ್ಸ್ ಫೈನಲ್ನಲ್ಲಿ ಅವರು6-2, 6-4ರಿಂದ ವಿ.ಪುರುಷೋತ್ತಮ್ ಅವರನ್ನು ಮಣಿಸಿದರೆ, ಡಬಲ್ಸ್ ವಿಭಾಗದಲ್ಲಿ ಮನೋಜ್ ಮಸಂದ್ ಜೊತೆಗೂಡಿ6-3, 7-6 (2)ರಿಂದ ಆರ್ಮುಗಂ ಮತ್ತು ಮುರುಗನ್ ಅವರನ್ನು ಸೋಲಿಸಿದರು.
ಸಿಂಗಲ್ಸ್ ವಿಭಾಗದ ಇನ್ನುಳಿದ ಫೈನಲ್ ಪಂದ್ಯಗಳಲ್ಲಿ ಪ್ರವಿಂದರ್ ವೇಲು (55–60 ವರ್ಷ)6-1, 6-1ರಿಂದ ಸುನಿಲ್ ರಾಜಣ್ಣ ಎದುರು, ಎಂ.ಎಸ್. ಫಾಲಚಂದ್ರ (61–65 ವರ್ಷ)6-7 (4), 6-4ರಿಂದ ರಾಜಶೇಖರ್ ವಿರುದ್ಧ, ಎಸ್.ಸೇತು (66–70 ವರ್ಷ)6-2, 6-0ರಿಂದ ತುಳಸಿರಾಮ್ ವಿರುದ್ಧ, ಎನ್. ವಿಜಯಕುಮಾರ್ (71–75)6-1, 6-2ರಿಂದ ಬಿ.ಎ. ಪ್ರಸಾದ್ ವಿರುದ್ಧ ಗೆದ್ದರು.
ಡಬಲ್ಸ್ ವಿಭಾಗದ ಫೈನಲ್ ಪಂದ್ಯಗಳಲ್ಲಿ ಸುನಿಲ್ ಹರಿ– ಅರುಣ್ ಕುಮಾರ್ ರೆಡ್ಡಿ (35–45 ವರ್ಷ)6-1, 6-2ರಿಂದ ಅಮರ್– ವೆಂಕಟರಾಮ್ ವಿರುದ್ಧ, ಸುನಿಲ್ ರಾಜಣ್ಣ– ಶಶಿಧರ್ ಪಟೇಲ್ (56–65 ವರ್ಷ) 4-6, 7-5, 10-3ರಿಂದ ಮಹೇಶ್ ಕಲ್ರೊ– ದೀಪಕ್ ನಾರಂಗ್ ಎದುರು, ತುಳಸಿರಾಮ್– ವಿಜಯಕುಮಾರ್ (66–75 ವರ್ಷ)6-1, 6-2ರಿಂದ ಎಸ್.ಸೇತು– ಬಿ.ಎ.ಪ್ರಸಾದ್ ವಿರುದ್ಧ ಜಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.