ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಮೂರನೇ ಸುತ್ತಿಗೆ ನಡಾಲ್‌, ಒಸಾಕ

ಹಲೆಪ್‌, ಶರಣ್‌ ನಿರ್ಗಮನ

ಪಿಟಿಐ
Published 30 ಆಗಸ್ಟ್ 2019, 20:00 IST
Last Updated 30 ಆಗಸ್ಟ್ 2019, 20:00 IST
ಚೆಂಡು ಹಿಂದಿರುಗಿಸುತ್ತಿರುವ ನವೊಮಿ ಒಸಾಕ–ಎಎಫ್‌ಪಿ ಚಿತ್ರ
ಚೆಂಡು ಹಿಂದಿರುಗಿಸುತ್ತಿರುವ ನವೊಮಿ ಒಸಾಕ–ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಭಾರತದ ದಿವಿಜ್‌ ಶರಣ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನಿರಾಸೆ ಕಂಡರು. ಮೊನಾಕೊದ ಹ್ಯುಗೊ ನಿಸ್‌ ಜೊತೆಯಾಗಿ ಆಡಿದ ಅವರು ಡಬಲ್ಸ್ ಮೊದಲ ಸುತ್ತಿನಲ್ಲಿ ರಾಬರ್ಟ್‌ ಕಾರ್ಬಲ್ಲೆಸ್‌ ಬೇನಾ–ಫೆಡರಿಕೊ ಡೆಲ್ಬೊನಿಸ್‌ ಜೋಡಿಗೆ ಸೋತರು.

ಸ್ಪೇನ್‌ ಹಾಗೂ ಅರ್ಜೆಂಟೀನಾದ ಜೋಡಿಯ ಎದುರು 72 ನಿಮಿಷಗಳ ಹಣಾಹಣಿಯಲ್ಲಿ 4–6, 4–6 ಸೆಟ್‌ಗಳಿಂದ ದಿವಿಜ್‌ ಜೋಡಿ ಶರಣಾಯಿತು. ಎಡಗೈ ಆಟಗಾರ ದಿವಿಜ್‌, ಈ ಋತುವಿನಲ್ಲಿ ಎರಡನೇ ಗ್ರ್ಯಾನ್‌ಸ್ಲ್ಯಾಮ್‌ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ನಿರ್ಗಮಿಸಿದರು. ಆಸ್ಟ್ರೇಲಿಯಾ ಓಪನ್‌ನಲ್ಲೂ ಅವರಿಗೆ ಆರಂಭಿಕ ಸುತ್ತಿನಲ್ಲಿ ಸೋಲು ಎದುರಾಗಿತ್ತು.

ಗುರುವಾರ ಮುಕ್ತಾಯಗೊಂಡ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಅವರಿಗೆ ವಾಕ್‌ಓವರ್‌ ಲಭಿಸಿತು. ಆಸ್ಟ್ರೇಲಿಯಾದ ಥನಸಿ ಕೊಕ್ಕಾನಕಿಸ್‌ ಎದುರು ಅವರು ಆಡಬೇಕಿತ್ತು.ಇತರ ಪಂದ್ಯಗಳಲ್ಲಿ ಡೆನಿಸ್‌ ಕುಡ್ಲಾ ಅವರು ಡುಸಾನ್‌ ಲಾಜೊವಿಕ್‌ ವಿರುದ್ಧ 7–5, 7–5, 0–6, 6–3ರಿಂದ ಗೆದ್ದರು. ಇತರ ಹಣಾಹಣಿಗಳಲ್ಲಿ ಸ್ಟ್ಯಾನಿಸ್ಲಾಸ್‌ ವಾವ್ರಿಂಕಾ ಅವರು ಜೆರೆಮಿ ಚಾರ್ಡಿ ಎದುರು 6–4, 6–3, 6–7, 6–3ರಿಂದ, ಫೆಲಿಸಿಯಾನೊ ಲೋಪೆಜ್‌ ಅವರು ಯೋಷಿಹಿಟೊ ನಿಶಿಯೊಕಾ ಎದುರು 6–7, 6–0, 6–4, 6–4ರಿಂದ ಜಯ ಸಾಧಿಸಿ ಮೂರನೇ ಸುತ್ತು ಪ್ರವೇಶಿಸಿದರು.

ADVERTISEMENT

ನಿಕ್‌ ಕಿರ್ಗಿಯೊಸ್‌ ಅವರು ಅಂಟೋಯಿನ್‌ ಹೊವಾಂಗ್‌ ಅವರನ್ನು 6–4, 6–2, 6–4ರಿಂದ, ಡ್ಯಾನಿಲ್‌ ಮೆಡ್ವಡೇವ್‌ ಅವರು ಹ್ಯುಗೊ ಡೇಲಿಯನ್‌ ಮೇಲೆ 6–3, 7–5, 5–7, 6–3ರಿಂದ, ಡೇವಿಡ್‌ ಗಫಿನ್‌ ಅವರು ಗ್ರೆಗೊರ್‌ ಬ್ಯಾರರ್‌ ವಿರುದ್ಧ 6–2, 6–2, 6–2ರಿಂದ ಗೆಲುವಿನ ನಗೆ ಬೀರಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಜಪಾನ್‌ನ ನವೊಮಿ ಒಸಾಕ ಅವರು ಮ್ಯಾಗ್ಡಾ ಲಿನೆಟ್‌ ಎದುರು 6–2, 6–4ರಿಂದ ಗೆದ್ದು ಮೂರನೇ ಸುತ್ತು ಪ್ರವೇಶಿಸಿದರು.ಪೋಲೆಂಡ್‌ ಆಟಗಾರ್ತಿಯಿಂದ ಒಸಾಕಗೆ ಕಠಿಣ ಸವಾಲು ಎದುರಾಗಲಿಲ್ಲ. ಇತರ ಪಂದ್ಯಗಳಲ್ಲಿ ಕೊಕೊ ಗಫ್‌ ಅವರು ಟಿಮಿಯಾ ಬಾಬೊಸ್‌ ಎದುರು 6–2, 4–6, 6–4ರಿಂದ, ಬೆಲಿಂದಾ ಬೆನ್ಸಿಕ್‌ ಅವರು ಅಲಿಜ್‌ ಕಾರ್ನೆಟ್‌ ಎದುರು 6–4, 1–6, 6–2ರಿಂದ ಗೆದ್ದರು.

ಹಲೆಪ್‌ಗೆ ಆಘಾತ: ನಾಲ್ಕನೇ ಶ್ರೇಯಾಂಕದ ಸಿಮೊನಾ ಹಲೆಪ್‌ ಅವರು ಎರಡನೇ ಸುತ್ತಿನಲ್ಲೇ ನಿರ್ಗಮಿಸಿದರು. ಅಮೆರಿಕದ ಟೇಲರ್‌ ಟೌನ್‌ಸೆಂಡ್‌ ಎದುರು 6–2, 3–6, 6–7 ಸೆಟ್‌ಗಳಿಂದ ಅವರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.