ADVERTISEMENT

ಟೆನಿಸ್: ಪದ್ಮಪ್ರಿಯಾಗೆ ಅವಳಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಮೇ 2025, 21:03 IST
Last Updated 18 ಮೇ 2025, 21:03 IST
<div class="paragraphs"><p>ಪದ್ಮಪ್ರಿಯಾ ರಮೇಶ್‌ ಕುಮಾರ್‌</p></div>

ಪದ್ಮಪ್ರಿಯಾ ರಮೇಶ್‌ ಕುಮಾರ್‌

   

ಬೆಂಗಳೂರು: ಮೈಸೂರಿನ ಪದ್ಮಪ್ರಿಯಾ ರಮೇಶ್‌ ಕುಮಾರ್‌ ಅವರು ಬಹ್ರೇನ್‌ನಲ್ಲಿ ನಡೆದ 14 ವರ್ಷದೊಳಗಿನವರ ಏಷ್ಯನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ‘ಡಬಲ್‌’ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಭಾರತ ಪ್ರತಿನಿಧಿಸಿದ್ದ ಪದ್ಮಪ್ರಿಯಾ ಬಾಲಕಿಯರ ಸಿಂಗಲ್ಸ್‌ ಮತ್ತು ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಸಿಂಗಲ್ಸ್‌ ಫೈನಲ್‌ನಲ್ಲಿ ಪದ್ಮಪ್ರಿಯಾ 6-1, 6-1ರ ನೇರ ಸೆಟ್‌ಗಳಿಂದ ಆತಿಥೇಯ ಬಹ್ರೇನ್‌ನ ಸೋಫಿಯಾ ಬೇಡರ್ ಅವರನ್ನು ಮಣಿಸಿ ಕಿರೀಟ ಮುಡಿಗೇರಿಸಿಕೊಂಡರು.

ADVERTISEMENT

ಮೊದಲ ಸುತ್ತಿನಲ್ಲಿ ಬೈ ಪಡೆದ ಅವರು 2ನೇ ಸುತ್ತಿನಲ್ಲಿ 6-0, 6-1ರಿಂದ ರಷ್ಯಾದ ವಿಕ್ಟೋರಿಯಾ ಕಾರ್ಪೆಂಕೊ ವಿರುದ್ಧ; ಕ್ವಾರ್ಟರ್‌ ಫೈನಲ್‌ನಲ್ಲಿ 6-0, 6-0 ಯಿಂದ ಫಿಲಿಪೀನ್ಸ್‌ ಸಾರಾ ಬೆರ್ಮಾಸ್ ವಿರುದ್ಧ; ಸೆಮಿಫೈನಲ್‌ನಲ್ಲಿ 6-0, 6-1ರಿಂದ ಸೌದಿ ಅರೇಬಿಯಾದ ಫಾತಿಮಾ ಅಲ್ಬಾಜಾರಿ ವಿರುದ್ಧ ಸುಲಭ ಗೆಲುವು ಸಾಧಿಸಿದ್ದರು.

ಡಬಲ್ಸ್‌ನಲ್ಲಿ ರಷ್ಯಾದ ವಿಕ್ಟೋರಿಯಾ ಕಾರ್ಪೆಂಕೊ ಅವರೊಂದಿಗೆ ಕಣಕ್ಕಿಳಿದಿದ್ದ ಪದ್ಮಪ್ರಿಯಾ ಫೈನಲ್‌ನಲ್ಲಿ 6-2, 6-2ರಿಂದ ಸೋಫಿಯಾ ಬೇಡರ್ ಮತ್ತು ಸಾರಾ ಬೆರ್ಮಾಸ್ ಜೋಡಿಯನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.