ADVERTISEMENT

ದಾಖಲೆಯ ಹಾದಿಯಲ್ಲಿ ಸೆರೆನಾ

ಏಜೆನ್ಸೀಸ್
Published 8 ಜನವರಿ 2019, 19:28 IST
Last Updated 8 ಜನವರಿ 2019, 19:28 IST
ಸೆರೆನಾ ವಿಲಿಯಮ್ಸ್‌
ಸೆರೆನಾ ವಿಲಿಯಮ್ಸ್‌   

ಮೆಲ್ಬರ್ನ್‌: ಅಮೆರಿಕದ ಸೆರೆನಾ ವಿಲಿಯಮ್ಸ್ ಗ್ರ್ಯಾಂಡ್‌ ಸ್ಲಾಮ್‌ ಗೆದ್ದು ದಾಖಲೆ ಸರಿಗಟ್ಟುವ ಹಾದಿಯಲ್ಲಿದ್ದು, ಈಗ ಆಸ್ಟ್ರೇಲಿಯಾ ಓಪನ್‌ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ.

ಹಾಲಿ ಚಾಂಪಿಯನ್ ಕ್ಯಾರೊಲಿನ್‌ ವೊಜ್‌ನಿಯಾಕಿ ಅವರು ಆರೋಗ್ಯ ಸಮಸ್ಯೆಯಿಂದ ಹೋರಾಡುತ್ತಿದ್ದು, ವಿಲಿಯಮ್ಸ್‌ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2017ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲಿ ವಿಲಿಯಮ್ಸ್‌ ಗೆದ್ದಿದ್ದರು.

ಈವರೆಗೂ 23 ಗ್ರ್ಯಾಂಡ್‌ ಸ್ಲಾಮ್‌ ಜಯಿಸಿರುವ ಸೆರೆನಾ, ಏಳು ಪ್ರಶಸ್ತಿಗಳನ್ನು ಮೆಲ್ಬರ್ನ್‌ನಲ್ಲಿಯೇ ಗೆದ್ದಿದ್ದಾರೆ.

ADVERTISEMENT

ಮುಂಬರುವ ಪಂದ್ಯದಲ್ಲಿ ಜಯಿಸಿದರೆ, 24 ಗ್ರ್ಯಾಂಡ್‌ ಸ್ಲಾಮ್‌ ಗೆದ್ದಿರುವ ಆಸ್ಟ್ರೇಲಿಯಾದ ಮಾರ್ಗರೇಟ್‌ ಕೋರ್ಟ್ಸ್‌ (ಮಹಿಳೆಯರ ಸಿಂಗಲ್ಸ್‌ನಲ್ಲಿ) ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

37 ವರ್ಷದ ಸೆರೆನಾ, ಪ್ರಸ್ತುತ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಅಮೆರಿಕ ಓಪನ್‌ನಲ್ಲಿ ವಿಲಿಯಮ್ಸ್‌, ನವೊಮಿ ಒಸಾಕಾ ಎದುರು ಸೋತಿದ್ದರು. ಅಮೆರಿಕ ಓಪನ್‌ನಲ್ಲಿ ಜಯಿಸಿದ್ದ ಒಸಾಕ, ಆಸ್ಟ್ರೇಲಿಯಾ ಓಪನ್‌ಗೆ ಪ್ರವೇಶಿಸಿದ್ದಾರೆ. ಕಳೆದ ವಾರ ನಡೆದ ಬ್ರಿಸ್‌ಬೇನ್ ಇಂಟರ್‌ನ್ಯಾಷನಲ್‌ ಟೂರ್ನಿಯಲ್ಲಿ ಸೆಮಿ ಫೈನಲ್‌ ತಲುಪಿದ್ದರು.

ಹಲೆಪ್‌ ಕಣಕ್ಕೆ: ಬೆನ್ನು ನೋವಿನ ಸಮಸ್ಯೆಯಿಂದ 2018ರಲ್ಲಿ ಟೆನಿಸ್‌ನಿಂದ ಹೊರಗುಳಿಸಿದ್ದ ಸಿಮೊನಾ ಹಲೆಪ್‌ ಈ ಬಾರಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.