ADVERTISEMENT

ಬಾಸ್‌ ಓಪನ್ ಟೆನಿಸ್‌ ಟೂರ್ನಿ: ಭಾಂಬ್ರಿ–ಗ್ಯಾಲೊವೆ ಜೋಡಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 3:06 IST
Last Updated 12 ಜೂನ್ 2025, 3:06 IST
<div class="paragraphs"><p>ಯುಕಿ&nbsp;ಭಾಂಬ್ರಿ</p></div>

ಯುಕಿ ಭಾಂಬ್ರಿ

   

ಸ್ಟುಟ್‌ಗಾರ್ಟ್‌: ಭಾರತದ ಅಗ್ರ ಡಬಲ್ಸ್ ಆಟಗಾರನಾಗಿರುವ ಯುಕಿ ಭಾಂಬ್ರಿ ಮತ್ತು ಅವರ ಅಮೆರಿಕದ ಜೊತೆಗಾರ ರಾಬರ್ಟ್‌ ಗ್ಯಾಲೊವೆ ಅವರು ಬಾಸ್‌ ಓಪನ್ ಟೆನಿಸ್‌ ಟೂರ್ನಿಯ ಡಬಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸೋಲುವ ಮೊದಲು ತೀವ್ರ ಪ್ರತಿರೋಧ ಪ್ರದರ್ಶಿಸಿದರು.

ಮಂಗಳವಾರ ನಡೆದ ಪಂದ್ಯದಲ್ಲಿ ಇಂಡೊ– ಅಮೆರಿಕನ್ ಜೋಡಿ 6–7 (5), 6–7 (5) ರಿಂದ ಸ್ಯಾಂಟಿಯಾಗೊ ಗೊನ್ಸಾಲ್ವೆಝ್‌ (ಮೆಕ್ಸಿಕೊ)– ಆಸ್ಟಿನ್‌ ಕ್ರಾಯಿಚೆಕ್‌ ಜೋಡಿಗೆ ಮಣಿಯಿತು. ಈ ಪಂದ್ಯ 1 ಗಂಟೆ 34 ನಿಮಿಷ ನಡೆಯಿತು.

ADVERTISEMENT

ಅನುಭವಿ ರೋಹನ್ ಬೋಪಣ್ಣ– ಸ್ಯಾಂಡರ್ಸ್‌ ಗಿಲ್‌ (ಬೆಲ್ಜಿಯಂ) ಜೋಡಿ, ಶ್ರೀರಾಮ್‌ ಬಾಲಾಜಿ– ಮಿಗೆಲ್‌ ರೆಯಿಸ್‌ ವರೆಲಾ (ಮೆಕ್ಸಿಕೊ) ಜೋಡಿ ಕೂಡ ಈ ಟೂರ್ನಿಯಲ್ಲಿ ಕಣಕ್ಕಿಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.