ADVERTISEMENT

ಡೇವಿಸ್‌ ಕಪ್‌ ಟೆನಿಸ್‌: ಕ್ರೊವೇಷ್ಯಾಗೆ ಮುನ್ನಡೆ

ಏಜೆನ್ಸೀಸ್
Published 24 ನವೆಂಬರ್ 2018, 17:37 IST
Last Updated 24 ನವೆಂಬರ್ 2018, 17:37 IST
ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ಲಿಲೆ, ಫ್ರಾನ್ಸ್‌ : ಮರಿನ್‌ ಸಿಲಿಕ್‌ ಮತ್ತು ಬೋರ್ನಾ ಕೊರಿಕ್‌ ಅವರ ಅಪೂರ್ವ ಆಟದ ನೆರವಿನಿಂದ ಕ್ರೊವೇಷ್ಯಾ ತಂಡ ಫ್ರಾನ್ಸ್‌ ಎದುರಿನ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ 2–0 ಮುನ್ನಡೆ ಗಳಿಸಿದೆ.

ಶುಕ್ರವಾರ ರಾತ್ರಿ ನಡೆದ ಮೊದಲ ಸಿಂಗಲ್ಸ್‌ ಪೈಪೋಟಿಯಲ್ಲಿ ಕೊರಿಕ್‌ 6–2, 7–5, 6–4ರಲ್ಲಿ ಜೆರೆಮಿ ಚಾರ್ಡಿ ಅವರನ್ನು ಪರಾಭವಗೊಳಿಸಿ ಕ್ರೊವೇಷ್ಯಾಗೆ 1–0 ಮುನ್ನಡೆ ತಂದುಕೊಟ್ಟರು.

ಎರಡನೇ ಸಿಂಗಲ್ಸ್‌ನಲ್ಲಿ ಸಿಲಿಕ್‌ ಮೋಡಿ ಮಾಡಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಅವರು 6–3, 7–5, 6–4ರಲ್ಲಿ ಜೋ ವಿಲ್ಫ್ರೆಡ್‌ ಸೊಂಗಾ ಎದುರು ಗೆದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.