ADVERTISEMENT

ಸೌದಿ ಅರೇಬಿಯಾದಲ್ಲಿ ಪ್ರದರ್ಶನ ಪಂದ್ಯ: ಜೊಕೊವಿಚ್‌, ನಡಾಲ್ ಭಾಗಿ

ಪಿಟಿಐ
Published 8 ಫೆಬ್ರುವರಿ 2024, 17:41 IST
Last Updated 8 ಫೆಬ್ರುವರಿ 2024, 17:41 IST
ನೊವಾಕ್ ಜೊಕೊವಿಚ್
ನೊವಾಕ್ ಜೊಕೊವಿಚ್   

ರಿಯಾದ್ (ಎಎಫ್‌ಪಿ): ಸೌದಿ ಅರೇಬಿಯಾದಲ್ಲಿ ಟೆನಿಸ್‌ಗೆ ಉತ್ತೇಜನ ನೀಡುವ ಕುರಿತು ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಅಕ್ಟೋಬರ್‌ನಲ್ಲಿ ಆಯೋಜಿಸಿರುವ ಪ್ರದರ್ಶನ ಪಂದ್ಯದಲ್ಲಿ ಪ್ರಮುಖ ಆಟಗಾರರಾದ ನೊವಾಕ್ ಜೊಕೊವಿಚ್ ಮತ್ತು ರಫೆಲ್ ನಡಾಲ್ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. 

‘6 ಕಿಂಗ್ಸ್ ಸ್ಲಾಮ್‌’ ಪ್ರದರ್ಶನ ಪಂದ್ಯದಲ್ಲಿ ವಿಂಬಲ್ಡನ್ ಚಾಂಪಿಯನ್ ಕಾರ್ಲೋಸ್‌ ಅಲ್ಕರಾಜ್‌ ಮತ್ತು ಆಸ್ಟ್ರೇಲಿಯನ್ ಓಪನ್ ವಿಜೇತ ಯಾನಿಕ್ ಸಿನ್ನರ್ ಅವರೊಂದಿಗೆ ಜೊಕೊವಿಚ್ ಮತ್ತು ನಡಾಲ್ ಸಹ ಭಾಗವಹಿಸುವರು.

ವಿಶ್ವದ ಮೂರನೇ ಶ್ರೇಯಾಂಕಿತ ಡೇನಿಯಲ್ ಮೆಡ್ವೆಡೇವ್‌ ಮತ್ತು ಏಳನೇ ಶ್ರೇಯಾಂಕದ  ಹೋಲ್ಗರ್‌ ರೂನ್‌ ಸಹ ಪಂದ್ಯದಲ್ಲಿ ಆಡಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.