ADVERTISEMENT

ಟೆನಿಸ್‌ಗೆ ವಿದಾಯ ಹೇಳಿದ ಫ್ಯಾಬಿಯೊ ಫೊಗ್ನಿನಿ

ಪಿಟಿಐ
Published 10 ಜುಲೈ 2025, 0:26 IST
Last Updated 10 ಜುಲೈ 2025, 0:26 IST
   

ಲಂಡನ್: ಇಟಲಿಯ ವರ್ಣರಂಜಿತ ಟೆನಿಸಿಗ ಫ್ಯಾಬಿಯೊ ಫೊಗ್ನಿನಿ ಅವರು ಟೆನಿಸ್‌ಗೆ ವಿದಾಯ ಹೇಳಿದರು.

ವಿದಾಯ ಹೇಳುವುದಾಗಿ ಅವರು ವಿಂಬಲ್ಡನ್‌ನಲ್ಲಿ ಬುಧವಾರ ಪ್ರಕಟಿಸಿದರು.

38 ವರ್ಷ ವಯಸ್ಸಿನ ಫೊಗ್ನಿನಿ ಅವರು ವಿಂಬಲ್ಡನ್‌ ಚಾಂಪಿಯನ್‌ಷಿಪ್‌ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕಾರ್ಲೋಸ್‌ ಅಲ್ಕರಾಜ್ ಎದುರು ಹೋರಾಟ ತೋರಿ ಐದು ಸೆಟ್‌ಗಳಲ್ಲಿ ಸೋತಿದ್ದರು.

ADVERTISEMENT

2019ರಲ್ಲಿ ಒಂಬತ್ತನೇ ಕ್ರಮಾಂಕಕ್ಕೆ ಏರಿದ್ದು ಅವರ ಈವರೆಗಿನ ಉತ್ತಮ ಸಾಧನೆ. ಅವರು 9 ಎಟಿಪಿ ಟೂರ್ ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾರೆ. ಅವರ ಏಕೈಕ ಮಾಸ್ಟರ್ಸ್‌ 1,000 ಟೂರ್ನಿಯ ಪ್ರಶಸ್ತಿ ಗೆಲುವು ಬಂದಿದ್ದು 2019ರ ಮಾಂಟೆ ಕಾರ್ಲೊ ಟೂರ್ನಿಯಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.