ADVERTISEMENT

ಟೆನಿಸ್: ಸೋಹ, ಹುಮೇರ ಕ್ವಾರ್ಟರ್ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 15:32 IST
Last Updated 10 ಫೆಬ್ರುವರಿ 2021, 15:32 IST
ಹುಮೇರ ಅವರ ಆಟದ ಶೈಲಿ
ಹುಮೇರ ಅವರ ಆಟದ ಶೈಲಿ   

ಬೆಂಗಳೂರು: ಕರ್ನಾಟಕದ ಸೋಹ ಸಾದಿಕ್ ಮತ್ತು ತೆಲಂಗಾಣದ ಹುಮೇರ ಬಹಾರ್ಮಸ್‌ ಇಲ್ಲಿನ ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ರಾಜ್ಯ ಟೆನಿಸ್ ಸಂಸ್ಥೆ ಆಶ್ರಯದ ಎಐಟಿಎ ಮಹಿಳಾ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದರು. ಶ್ರವ್ಯ ಶಿವಾನಿ, ಸೊನಾಶೆ, ಶರ್ಮದ ಮತ್ತು ನಿಧಿ ಕೂಡ ಅಂತಿಮ ಎಂಟರ ಘಟ್ಟಕ್ಕೆ ಕಾಲಿಟ್ಟರು.

ಬುಧವಾರ ನಡೆದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಹುಮೇರ ಬಹರ್ಮಸ್ ತಮ್ಮದೇ ರಾಜ್ಯದ ಅಭಯಾ ವೇಮುರಿ ಅವರನ್ನು 6-1, 6-0ರಲ್ಲಿ ಮಣಿಸಿದರು. ಎರಡನೇ ಶ್ರೇಯಾಂಕಿತೆ ಸೋಹ, ತೆಲಂಗಾಣದ ಮಶ್ರತ್ ಅಂಜುಮ್ ಶೇಕ್‌ ವಿರುದ್ಧ 6-3, 6-0ರಲ್ಲಿ ಜಯ ಸಾಧಿಸಿದರು. ತೆಲಂಗಾಣದ ಶ್ಯವ್ಯ ಶಿವಾನಿ 6-0, 6-1ರಲ್ಲಿ ಕರ್ನಾಟಕದ ನಿಧಿ ಶ್ರೀನಿವಾಸ್ ಅವರನ್ನು ಸೋಲಿಸಿದರು. ಶ್ರವ್ಯ ಮೂರನೇ ಶ್ರೇಯಾಂಕ ಹೊಂದಿದ್ದಾರೆ.

ಕರ್ನಾಟಕದ ಸೊನಾಶೆ ಭಟ್ನಾಗರ್ ಮಧ್ಯಪ್ರದೇಶದ ಯಶಸ್ವಿನಿ ಸಿಂಗ್ ಪನ್ವರ್ ಅವರ ಸವಾಲನ್ನು 6-1, 6-2ರಲ್ಲಿ ಮೀರಿದರೆ ತೆಲಂಗಾಣದ ಅಪೂರ್ವ ವೇಮುರಿ ಕರ್ನಾಟಕದ ಅಪೇಕ್ಷ ಸೋಳಂಕಿ ಅವರನ್ನು 6-0, 6-1ರಲ್ಲಿ ಮಣಿಸಿದರು. ತಮ್ಮದೇ ರಾಜ್ಯದ ಅಪೂರ್ವ ಎಸ್‌.ಬಿ ಅವರ ಆರಂಭಿಕ ಮುನ್ನಡೆಗೆ ಪ್ರತ್ಯುತ್ತರ ನೀಡಿದ ಕರ್ನಾಟಕದ ಶರ್ಮದಾ ಬಾಲು 6-3, 6-0ರಲ್ಲಿ ಜಯ ಗಳಿಸಿದರೆತೆಲಂಗಾಣದ ನಿಧಿ ಚಿಲ್ಮುಲ 6-3, 6-4ರಲ್ಲಿ ಮಹಾರಾಷ್ಟ್ರದ ಆರ್ಯಾಲಿ ಚವಾಣ್‌ ವಿರುದ್ಧ ಗೆದ್ದರು.

ADVERTISEMENT

ಡಬಲ್ಸ್‌ನಲ್ಲಿ ಶ್ರವ್ಯ ಶಿವಾನಿ ಮತ್ತು ಶರ್ಮದ ಬಾಲು ಜೋಡಿ ಕರ್ನಾಟಕದ ನಿಧಿ ಬುವಿಲ ಮತ್ತು ಭಾರ್ಗವಿ ಓಲೇಕಾರ್ ಅವರನ್ನು 6-0, 6-0ಯಲ್ಲಿ ಮಣಿಸಿದರೆ ಸೊನಾಶೆ ಭಟ್ನಾಗರ್ ಮತ್ತು ಹುಮೇರ ಜೋಡಿ ಆರ್ಯಾಲಿ ಮತ್ತು ಕರ್ನಾಟಕದ ನಿಹಾರಿಕ ದೇಶ್‌ಮುಖ್‌ ಅವರನ್ನು 6-0, 6-1ರಲ್ಲಿ ಸೋಲಿಸಿದರು. ತೆಲಂಗಾಣದ ಮುಬಾಶಿರ ಶೇಕ್‌ ಮತ್ತು ಮುಶ್ರತ್ ಅಂಜುಮ್ ಶೇಕ್‌ ಆಂಧ್ರಪ್ರದೇಶದ ಸರ್ವಾನಿ ಚಿಂತಲಪಲಿ ಮತ್ತು ತಮಿಳುನಾಡಿನ ಮೇಘ ಮುತ್ತುಕುಮಾರನ್ ಜೋಡಿ ವಿರುದ್ಧ 6-2, 6-4ರಲ್ಲಿ, ಕರ್ನಾಟಕದ ಸೋಹ ಸಾದಿಕ್ ಮತ್ತು ವರ್ಷಿತ ಪಠಾಣಿಯ ತೆಲಂಗಾಣ ಜೋಡಿ ಅಭಯ ವೇಮೂರಿ ಮತ್ತು ಅಪೂರ್ವ ವೇಮೂರಿ ಜೋಡಿ ವಿರುದ್ಧ 7-6 (5), 7-5ರಲ್ಲಿ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.