ADVERTISEMENT

ಟೆನಿಸ್‌: ಫ್ರಾನ್ಸೆಸ್ಕಾ ನಿವೃತ್ತಿ

ರಾಯಿಟರ್ಸ್
Published 6 ಸೆಪ್ಟೆಂಬರ್ 2018, 17:37 IST
Last Updated 6 ಸೆಪ್ಟೆಂಬರ್ 2018, 17:37 IST
ಫ್ರಾನ್ಸೆಸ್ಕಾ ಶಿಯಾವೊನ್‌
ಫ್ರಾನ್ಸೆಸ್ಕಾ ಶಿಯಾವೊನ್‌   

ನ್ಯೂಯಾರ್ಕ್‌: ಇಟಲಿಯ ಫ್ರಾನ್ಸೆಸ್ಕಾ ಶಿಯಾವೊನ್‌ ಅವರು ಗುರುವಾರ ಟೆನಿಸ್‌ ಬದುಕಿಗೆ ವಿದಾಯ ಹೇಳಿದ್ದಾರೆ.

1980 ಜೂನ್‌ 23ರಂದು ಮಿಲಾನ್‌ನಲ್ಲಿ ಜನಿಸಿದ್ದ ಫ್ರಾನ್ಸೆಸ್ಕಾ, 1998ರಲ್ಲಿ ವೃತ್ತಿಪರ ಟೆನಿಸ್‌ಗೆ ಪದಾರ್ಪಣೆ ಮಾಡಿದ್ದರು.

2010ರಲ್ಲಿ ನಡೆದಿದ್ದ ಫ್ರೆಂಚ್‌ ಓಪನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಈ ಸಾಧನೆ ಮಾಡಿದ್ದ ಇಟಲಿಯ ಮೊದಲ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದರು. ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಸಮಂತಾ ಸೊಸುರ್‌ ಅವರನ್ನು ಮಣಿಸಿದ್ದರು.

ADVERTISEMENT

ಅಮೆರಿಕ ಓಪನ್‌ನಲ್ಲಿ (2003 ಮತ್ತು 2010) ಎರಡು ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಅವರು ವಿಂಬಲ್ಡನ್‌ (2009) ಹಾಗೂ ಆಸ್ಟ್ರೇಲಿಯಾ ಓಪನ್‌ನಲ್ಲೂ (2011) ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದರು.

ಸಿಂಗಲ್ಸ್‌ನಲ್ಲಿ ಒಟ್ಟು ಎಂಟು ಪ್ರಶಸ್ತಿಗಳನ್ನು ಜಯಿಸಿದ್ದ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಪ್ರಸ್ತುತ 454ನೇ ಸ್ಥಾನದಲ್ಲಿದ್ದರು.

‘ಖುಷಿಯಿಂದಲೇ ವೃತ್ತಿಬದುಕಿಗೆ ವಿದಾಯ ಹೇಳಲು ತೀರ್ಮಾನಿಸಿದ್ದೇನೆ. ಮುಂದೆ ಕೋಚ್‌ ಆಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ’ ಎಂದುಫ್ರಾನ್ಸೆಸ್ಕಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.