ADVERTISEMENT

ಡಬ್ಲ್ಯುಟಿಎ ರ‍್ಯಾಂಕಿಂಗ್‌: ಜೊಕೊವಿಚ್, ಒಸಾಕ ಸ್ಥಾನ ಅಬಾಧಿತ

ಎರಡನೇ ಸ್ಥಾನಕ್ಕೆ ಬಡ್ತಿ ಪಡೆದ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ

ಏಜೆನ್ಸೀಸ್
Published 10 ಜೂನ್ 2019, 20:00 IST
Last Updated 10 ಜೂನ್ 2019, 20:00 IST
ನೊವಾಕ್‌ ಜೊಕೊವಿಚ್‌  –ರಾಯಿಟರ್ಸ್‌ ಚಿತ್ರಗಳು
ನೊವಾಕ್‌ ಜೊಕೊವಿಚ್‌ –ರಾಯಿಟರ್ಸ್‌ ಚಿತ್ರಗಳು   

ಪ್ಯಾರಿಸ್‌: ಈ ಬಾರಿಯ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆ್ಯಶ್ಲೆ ಬಾರ್ಟಿ ಅವರಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಒಲಿದಿದೆ. ಆಸ್ಟ್ರೇಲಿಯಾ ಆಟಗಾರ್ತಿ ಒಟ್ಟು ಆರು ಸ್ಥಾನಗಳ ಏರಿಕೆ ಕಂಡಿದ್ದಾರೆ.

ಸೋಮವಾರ ಪ್ರಕಟವಾದ ರ‍್ಯಾಂಕಿಂಗ್‌ ಪ್ರಕಾರ ಜಪಾನ್‌ ನವೊಮಿ ಒಸಾಕಾ ಅಗ್ರಸ್ಥಾನ ಅಬಾಧಿತವಾಗಿದೆ. ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಅವರು ಮೂರನೇ ಸುತ್ತಿನಲ್ಲೇ ಆಘಾತ ಅನುಭವಿಸಿದ್ದ ಅವರು ಸತತ ಮೂರನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಿಂದ ವಂಚಿತರಾಗಿದ್ದರು.

ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ನಾಲ್ಕರ ಘಟ್ಟದವರೆಗೆ ತಲುಪಿದ್ದ ಬ್ರಿಟನ್‌ನ ಜೊಹಾನ್ನಾ ಕೊಂತಾ ಅವರು ಎಂಟು ಸ್ಥಾನ ಏರಿಕೆ ಕಂಡು 18ನೇ ಸ್ಥಾನ ತಲುಪಿದ್ದಾರೆ.

ADVERTISEMENT

ಜೊಕೊವಿಚ್‌ ಸ್ಥಾನಕ್ಕಿಲ್ಲ ಧಕ್ಕೆ:ಸ್ಪೇನ್‌ ಪರಿಣತ ಆಟಗಾರ ರಫೆಲ್‌ ನಡಾಲ್‌ ಭಾನುವಾರ 12ನೇ ಬಾರಿ ಫ್ರೆಂಚ್‌ ಓಪನ್‌ ಕಿರೀಟ ಧರಿಸಿದ್ದರೂ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಜೊಕೊವಿಚ್‌ ಅವರನ್ನು ಹಿಂದಿಕ್ಕಲಾಗಿಲ್ಲ. ಜೊಕೊವಿಚ್‌ ಅವರು ಫ್ರೆಂಚ್‌ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದರು.

ಫೈನಲ್‌ ಪಂದ್ಯದಲ್ಲಿ ನಡಾಲ್‌ ಎದುರು ಶರಣಾದ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಸೆಮಿಫೈನಲ್‌ನಲ್ಲಿ ನಡಾಲ್‌ ಎದುರು ಮುಗ್ಗರಿಸಿದ್ದರು. ಸದ್ಯಅವರು ಮೂರನೇ ಸ್ಥಾನದಲ್ಲಿದ್ದಾರೆ.

ರಷ್ಯಾದ ಕರೆನ್‌ ಕಚನೊವ್‌ ಎರಡು ಸ್ಥಾನ ಬಡ್ತಿ ಪಡೆದು ಒಂಭತ್ತನೇ ಸ್ಥಾನದಲ್ಲಿದ್ದರೆ ಇಟಲಿಯ ಫ್ಯಾಬಿಯೊ ಫಾಗ್ನಿನಿ 10ನೇ ಸ್ಥಾನ ಪಡೆದಿದ್ದಾರೆ. ಸ್ಟ್ಯಾನಿಸ್ಲಾವ್‌ ವಾವ್ರಿಂಕಾ ಅವರು ಅಗ್ರ 20ರಲ್ಲಿ ಸ್ಥಾನ ಗಳಿಸಿದ್ದು, 19ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ನವೊಮಿ ಒಸಾಕ
ಆ್ಯಶ್ಲೆ ಬಾರ್ಟಿ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.