ADVERTISEMENT

ಟೆನಿಸ್‌: ಗುರ್ಲಿನ್‌ ಕೌರ್‌, ನವೀನ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 14:43 IST
Last Updated 5 ನವೆಂಬರ್ 2022, 14:43 IST
ಪ್ರಶಸ್ತಿಯೊಂದಿಗೆ ನವೀನ್ ಸುಂದರಂ ಮತ್ತು ಗುರ್ಲಿನ್ ಕೌರ್
ಪ್ರಶಸ್ತಿಯೊಂದಿಗೆ ನವೀನ್ ಸುಂದರಂ ಮತ್ತು ಗುರ್ಲಿನ್ ಕೌರ್   

ಬೆಂಗಳೂರು: ಗುರ್ಲಿನ್ ಕೌರ್‌ ಮತ್ತು ನವೀನ್ ಸುಂದರಂ ಅವರು ಎಐಟಿಎ ಚಾಂಪಿಯನ್‌ಷಿಪ್‌ ಸಿರೀಸ್‌ 14 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿ ಮತ್ತು ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಸ್ಯಾಟ್‌ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಗುರ್ಲಿನ್‌ 3-6, 6-2, 6-2ರಿಂದ ದೀಪ್ಶಿಕಾ ಅವರನ್ನು ಮಣಿಸಿದರು. ಮೊದಲ ಸೆಟ್‌ ಸೋತರೂ ಪುಟಿದೆದ್ದು ಗೆಲುವು ಒಲಿಸಿಕೊಂಡರು.

ಬಾಲಕಿಯರ ಡಬಲ್ಸ್‌ನಲ್ಲೂ ಗುರ್ಲಿನ್‌ ಅವರು ಗೀತಿಕಾ ಗದ್ದಂ ಅವರ ಜೊತೆಗೂಡಿ ಪ್ರಶಸ್ತಿ ಜಯಿಸಿದರು. ಫೈನಲ್‌ ಹಣಾಹಣಿಯಲ್ಲಿ ಈ ಜೋಡಿ6-2, 3-6, 10-6 ರಿಯಾ ಪುದಿಯೊಕ್ಡಾ ಮತ್ತು ಯಹಾನಾ ಅರೋರಾ ಅವರನ್ನು ಸೋಲಿದರು.

ADVERTISEMENT

ಬಾಲಕರ ಸಿಂಗಲ್ಸ್ ಪ್ರಶಸ್ತಿ ಸುತ್ತಿನಲ್ಲಿ ನವೀನ್‌6-1, 6-0ರಿಂದ ಶ್ರೇಯಾಂತ್‌ ಎಂ. ಅವರನ್ನು ಮಣಿಸಿದರು. ಡಬಲ್ಸ್‌ನಲ್ಲಿ ಶ್ರೇಯಾಂತ್‌ ಎಂ. ಮತ್ತು ತರುಣ್‌ ಎಚ್‌. ಅವರು 6-2, 6-3ರಿಂದ ಮೋಹಿತ್‌ ರೆಡ್ಡಿ ಮತ್ತು ಶಿವ ಸಂಪ್ರೀತ್‌ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.