ADVERTISEMENT

ಡೇವಿಸ್‌ ಕಪ್‌: ಕ್ವಾಲಿಫೈಯರ್ಸ್‌ಗೆ ಭಾರತ

ಪಿಟಿಐ
Published 13 ಸೆಪ್ಟೆಂಬರ್ 2025, 21:40 IST
Last Updated 13 ಸೆಪ್ಟೆಂಬರ್ 2025, 21:40 IST
   

ಬೀಲ್‌ (ಸ್ವಿಜರ್ಲೆಂಡ್‌): ಅನುಭವಿ ಸುಮಿತ್ ನಗಾಲ್‌ ಅವರು ಆಕ್ರಮಣಕಾರಿ ಯುವ ಆಟಗಾರ ಹೆನ್ರಿ ಬೆರ್ನೆಟ್‌ ಅವರನ್ನು ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ಸೋಲಿಸಿದರು. ಇದರೊಂದಿಗೆ ಭಾರತ ತಂಡವು ಡೇವಿಸ್‌ ಕಪ್‌ ವಿಶ್ವಗುಂಪಿನ್ (1) ಪಂದ್ಯದಲ್ಲಿ ಶನಿವಾರ ಸ್ವಿಜರ್ಲೆಂಡ್ ತಂಡವನ್ನು 3–1 ರಿಂದ ಸೋಲಿಸಿತು.

ಮೊದಲ ದಿನವಾದ ಶುಕ್ರವಾರ ದಕ್ಷಿಣೇಶ್ವರ ಸುರೇಶ್‌ ಮತ್ತು ಸುಮಿತ್ ನಗಾಲ್ ಸಿಂಗಲ್ಸ್ ಪಂದ್ಯಗಳನ್ನು ಗೆದ್ದು ಭಾರತಕ್ಕೆ 2–0 ಮುನ್ನಡೆ ಒದಗಿಸಿದ್ದರು. ಶನಿವಾರ ಮಧ್ಯಾಹ್ನ ಡಬಲ್ಸ್‌ನಲ್ಲಿ ಶ್ರೀರಾಮ್ ಬಾಲಾಜಿ ಮತ್ತು ರಿತ್ವಿಕ್‌ ಬೊಲ್ಲಿಪಲ್ಲಿ ಜೋಡಿ 1ಗಂಟೆ 26 ನಿಮಿಷಗಳ ಹೋರಾಟದಲ್ಲಿ 7–6 (3), 4–6, 5–7 ರಲ್ಲಿ ಜಾಕುಬ್‌ ಪಾಲ್– ಡೊಮಿನಿಕ್ ಸ್ಟ್ರಿಕರ್ ಅವರಿಗೆ ಮಣಿದ ಕಾರಣ ಭಾರತದ ಮುನ್ನಡೆ 2–1ಕ್ಕೆ ಇಳಿದಿತ್ತು.

ಮರು ಸಿಂಗಲ್ಸ್‌ನಲ್ಲಿ ನಗಾಲ್ ಅವರು ಜೆರೋಮ್ ಕಿಮ್ ಅವರನ್ನು ಎದುರಿಸಬೇಕಿತ್ತು. ಆದರೆ ಸ್ವಿಸ್‌ ತಂಡ ತನ್ನ ಪಾಲಿಗೆ ನಿರ್ಣಾಯಕ ಪಂದ್ಯಕ್ಕೆ ಹಾಲಿ ಆಸ್ಟ್ರೇಲಿಯನ್ ಓಪನ್ ಜೂನಿಯರ್ ಚಾಂಪಿಯನ್ ಬರ್ನೆಟ್ ಅವರನ್ನು ಕಣಕ್ಕಿಳಿಸಿತ್ತು. ಆದರೆ ನಗಾಲ್ ಈ ಪಂದ್ಯವನ್ನು ಸುಲಭವಾಗಿ 6–1, 6–3 ರಿಂದ ಗೆದ್ದರು.

ADVERTISEMENT

ಇದು 1993ರ ನಂತರ ಭಾರತ ತಂಡವು ದೇಶದಿಂದ ಹೊರಗೆ ಯುರೋಪ್ ತಂಡದ ಮೇಲೆ ಸಾಧಿಸಿದ ಮೊದಲ ಜಯ. ಭಾರತವು ಆ ವರ್ಷ ಫ್ರಾನ್ಸ್ ತಂಡವನ್ನು ಸೋಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.