ADVERTISEMENT

ಟೆನಿಸ್‌: ಭಾರತ–ಪಾಕ್‌ ಹಣಾಹಣಿ

ಪಿಟಿಐ
Published 28 ನವೆಂಬರ್ 2019, 18:56 IST
Last Updated 28 ನವೆಂಬರ್ 2019, 18:56 IST

ನೂರ್ ಸುಲ್ತಾನ್‌, ಕಜಕಸ್ತಾನ್‌ : ಪ್ರಬಲ ಭಾರತ ತಂಡ, ತಟಸ್ಥ ತಾಣ ನೂರ್‌ ಸುಲ್ತಾನ್‌ನಲ್ಲಿ ಶುಕ್ರವಾರ ಆರಂಭವಾಗುವ ಡೇವಿಸ್‌ ಕಪ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡದಿಂದ ಹೆಚ್ಚಿನ ಪ್ರತಿರೋಧ ಎದುರಿಸಲಿಕ್ಕಿಲ್ಲ ಎಂದು ನಿರೀಕ್ಷಿಸಲಾಗಿದೆ.

ಎರಡೂ ತಂಡಗಳ ಆಯ್ಕೆ ಚರ್ಚೆಗೆ ಗ್ರಾಸವಾಗಿತ್ತು. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಈ ಪಂದ್ಯ ನಡೆಯಬೇಕಿತ್ತು. ಆದರೆ ಭದ್ರತೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ ಕಾರಣ ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌), ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಿತ್ತು.ಸುಮಿತ್‌ ನಗಾಲ್‌, ರಾಮಕುಮಾರ್‌ ರಾಮನಾಥನ್‌ ಮತ್ತು ಹಳೆಯ ಹುಲಿ ಲಿಯಾಂಡರ್‌ ಪೇಸ್‌ ಅವರಂಥ ಆಟಗಾರರಿಂದ ತಂಡ ಪ್ರಬಲವಾಗಿದೆ. ಆದರೆ ಪಾಕ್‌ ತಂಡದ ಪ್ರಮುಖ ಆಟಗಾರರಾದ ಐಸಾಮ್‌ ಉಲ್‌ ಹಕ್‌ ಖುರೇಷಿ ಮತ್ತು ಅಖೀಲ್‌ ಖಾನ್‌ ಹಿಂದೆ ಸರಿದ ಕಾರಣ ಪಂದ್ಯ ಏಕಪಕ್ಷೀಯವಾಗಬಹುದೆಂಬ ನಿರೀಕ್ಷೆ ಮೂಡಿಸಿದೆ. ಪಾಕ್‌ ತಂಡದ ಕಿರಿಯ ಆಟಗಾರರಿಗೆ ಆಟಗಾರರಿಗೆ ಅನುಭವದ ದೃಷ್ಟಿಯಿಂದ ಇದು ಉತ್ತಮ ವೇದಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT