ADVERTISEMENT

ಬೋಪಣ್ಣ– ಎಬ್ಡೆನ್‌ ‘ರನ್ನರ್ಸ್‌ ಅಪ್‌’

​ಪ್ರಜಾವಾಣಿ ವಾರ್ತೆ
Published 7 ಮೇ 2023, 3:14 IST
Last Updated 7 ಮೇ 2023, 3:14 IST
   

ಮ್ಯಾಡ್ರಿಡ್‌: ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯು ಎಬ್ಡೆನ್ ಜೋಡಿ, ಮ್ಯಾಡ್ರಿಡ್‌ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಸೋತು ರನ್ನರ್ಸ್‌ ಅಪ್‌ ಆಯಿತು.

ಶನಿವಾರ ನಡೆದ ಫೈನಲ್‌ನಲ್ಲಿ ಬೋಪಣ್ಣ– ಎಬ್ಡೆನ್‌ 3-6, 6-3, 3-10 ರಲ್ಲಿ ರಷ್ಯಾದ ಕರೆನ್ ಕಚನೊವ್‌– ಆ್ಯಂಡ್ರೆ ರುಬ್ಲೆವ್ ಎದುರು ಪರಾಭವಗೊಂಡರು.

43 ವರ್ಷದ ಬೋಪಣ್ಣ ಅವರು ಮಾರ್ಚ್‌ನಲ್ಲಿ ಬಿಎನ್‌ಪಿ ಪರಿಬಾಸ್‌ ಓಪನ್‌ ಗೆದ್ದು, ಎಟಿಪಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.