ಪ್ಯಾರಿಸ್: ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಈ ವರ್ಷದಲ್ಲಿ ಮೊದಲ ಪ್ರಶಸ್ತಿಗೆ ಗೆದ್ದ ರಷ್ಯಾದ ಡೇನಿಯಲ್ ಮೆಡ್ವೆಡೆವ್, ಎಟಿಪಿ ರ‍್ಯಾಂಕಿಂಗ್‌ನಲ್ಲಿ ದಿಗ್ಗಜ ಆಟಗಾರ ರೋಜರ್ ಫೆಡರರ್ ಅವರನ್ನು ಹಿಂದಿಕ್ಕಿದ್ದಾರೆ. ಸೋಮವಾರ ಪ್ರಕಟವಾದ ವಿಶ್ವ ಟೆನಿಸ್ ಕ್ರಮಾಂಕದಲ್ಲಿ ಅವರು ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.
ಭಾನುವಾರ ನಡೆದ ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಮೆಡ್ವೆಡೆವ್ 5–7, 6–4, 6–1ರಿಂದ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಮಣಿಸಿದ್ದರು.
ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಈಗಾಗಲೇ ಈ ವರ್ಷವನ್ನು ಅಗ್ರ ಕ್ರಮಾಂಕದೊಂದಿಗೆ ಕೊನೆಗೊಳಿಸಿದ್ದಾರೆ. ಇದರೊಂದಿಗೆ ಆರನೇ ವರ್ಷ ಈ ಸಾಧನೆ ಮಾಡಿ ಅಮೆರಿಕದ ದಿಗ್ಗಜ ಆಟಗಾರ ಪೀಟ್ ಸಾಂಪ್ರಾಸ್ ದಾಖಲೆ ಸರಿಗಟ್ಟಿದ್ದಾರೆ.
ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದ ಕೆನಡಾದ ಮಿಲೊಸ್ ರಾನಿಕ್ ಮೂರು ಸ್ಥಾನ ಏರಿಕೆ ಕಂಡು 14ನೇ ಸ್ಥಾನದಲ್ಲಿದ್ದಾರೆ.
ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೊದಲ ಐದು ಸ್ಥಾನಗಳಲ್ಲಿರುವವರು: ನೊವಾಕ್ ಜೊಕೊವಿಚ್ (ಸರ್ಬಿಯಾ), ರಫೆಲ್ ನಡಾಲ್ (ಸ್ಪೇನ್), ಡಾಮಿನಿಕ್ ಥೀಮ್ (ಅಸ್ಟ್ರಿಯಾ), ಡೇನಿಯಲ್ ಮೆಡ್ವಡೆವ್ (ರಷ್ಯಾ) ಹಾಗೂ ರೋಜರ್ ಫೆಡರರ್ (ಸ್ವಿಟ್ಜರ್ಲೆಂಡ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.