ADVERTISEMENT

ಡೇವಿಸ್ ಕಪ್‌: ಭಾರತ ತಂಡಕ್ಕೆ ಭದ್ರತೆ ಭರವಸೆ

ಪಾಕಿಸ್ತಾನ ಟೆನಿಸ್‌ ಫೆಡರೇಷನ್‌ ಅಧ್ಯಕ್ಷ ಸಲೀಂ ಸೈಫುಲ್ಲಾ ಖಾನ್‌ ಭರವಸೆ

ಪಿಟಿಐ
Published 4 ಆಗಸ್ಟ್ 2019, 20:03 IST
Last Updated 4 ಆಗಸ್ಟ್ 2019, 20:03 IST

ನವದೆಹಲಿ (ಪಿಟಿಐ): ಪಾಕಿಸ್ತಾನಕ್ಕೆ ತೆರಳಲಿರುವ ಭಾರತ ಡೇವಿಸ್‌ ಕಪ್‌ ತಂಡಕ್ಕೆ ಪಾಕಿಸ್ತಾನ ಟೆನಿಸ್‌ ಫೆಡರೇಷನ್‌ (ಪಿಟಿಎಫ್‌) ಬಿಗಿ ಭದ್ರತೆಯ ಭರ ವಸೆ ನೀಡಿದೆ.
ಈ ಕುರಿತು ಮಾತನಾಡಿರುವ ಪಿಟಿಎಫ್‌ ಮುಖ್ಯಸ್ಥ ಸಲೀಂ ಸೈಫುಲ್ಲಾ ಖಾನ್‌ ‘ಸ್ಪರ್ಧೆ ವೀಕ್ಷಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ ಯೋಚನೆಯಿದೆ. ಭಾರತದ ಆಟಗಾರರು ಹಾಗೂ ಅಭಿಮಾನಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುವೆವು’ ಎಂದು ತಿಳಿಸಿದ್ದಾರೆ.

ಡೇವಿಸ್‌ ಕಪ್‌ ಟೂರ್ನಿಯ ಕುರಿತು ಪಾಕಿಸ್ತಾನದ ಜನರಲ್ಲಿ ಭಾರೀ ಕುತೂಹಲ ಮನೆಮಾಡಿದೆ. ಭಾರತ ತಂಡ ಡೇವಿಸ್‌ ಕಪ್‌ ಟೆನಿಸ್‌ ಆಡಲು 55 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. 1964ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಪಾಲ್ಗೊಂಡು 4–0ಯಿಂದ ಜಯಭೇರಿ ಮೊಳಗಿಸಿತ್ತು. ದಶಕದ ಬಳಿಕಪಾಕಿಸ್ತಾನ ಡೇವಿಸ್‌ ಕಪ್‌ ಆತಿಥ್ಯಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್‌ 14, 15ರಂದು ಟೂರ್ನಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT