ವೆಲ್ಲಿಂಗ್ಟನ್: ಕೋವಿಡ್–19 ಪಿಡುಗಿನ ಮಧ್ಯೆ ಮೊದಲ ವೃತ್ತಿಪರ ಟೆನಿಸ್ ಟೂರ್ನಿ ಆಯೋಜಿಸಲು ನ್ಯೂಜಿಲೆಂಡ್ ಸಿದ್ಧತೆ ನಡೆಸಿದೆ.
24 ಆಟಗಾರರನ್ನು ಒಳಗೊಂಡ ಮೂರು ತಂಡಗಳ ಪುರುಷರ ಪ್ರೀಮಿಯರ್ ಲೀಗ್ ಟೂರ್ನಿಯು ಜೂನ್ 3ರಿಂದ ಆರಂಭವಾಗಲಿದೆ. ಮೂರು ವಾರಗಳ ಕಾಲ ನಡೆಯುವ ಈ ಟೂರ್ನಿಯು ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆಯಲಿದೆ.
‘ಎಟಿಪಿ ಟೂರ್ನಿಗಳಲ್ಲಿ ಆಡುವ ಕೆಲವು ಅನುಭವಿಗಳು ಹಾಗೂ ನ್ಯೂಜಿಲೆಂಡ್‌ನ ಉದಯೋನ್ಮುಖ ಆಟಗಾರರು ಇಲ್ಲಿ ಸೆಣಸಲಿದ್ದಾರೆ’ ಟೆನಿಸ್ ನ್ಯೂಜಿಲೆಂಡ್‌ನ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಕ್ರಿಸ್ಟೋಫೆ ಲ್ಯಾಂಬರ್ಟ್ ಹೇಳಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ ತನ್ನ ಬಾಲ್ಯ ಕಳೆದಿರುವ ವಿಶ್ವ 77ನೇ ಕ್ರಮಾಂಕದ ಆಟಗಾರ,ಬ್ರಿಟನ್‌ನ ಕ್ಯಾಮರಾನ್ ನಾರ್ರಿ ಹಾಗೂ ನ್ಯೂಜಿಲೆಂಡ್‌ನ ಡೇವಿಸ್ ಕಪ್ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.