ADVERTISEMENT

ಗೆಳತಿ ಜಿಸ್ಕಾ ಪರೆಲ್ಲೊ ಮದುವೆಯಾದ ರಫೆಲ್‌ ನಡಾಲ್

ಏಜೆನ್ಸೀಸ್
Published 20 ಅಕ್ಟೋಬರ್ 2019, 19:48 IST
Last Updated 20 ಅಕ್ಟೋಬರ್ 2019, 19:48 IST
ಜಿಸ್ಕಾ ಪರೆಲ್ಲೊ
ಜಿಸ್ಕಾ ಪರೆಲ್ಲೊ   

ಮ್ಯಾಡ್ರಿಡ್‌: ಸ್ಪೇನ್‌ನ ಟೆನಿಸ್‌ ಆಟಗಾರ ರಫೆಲ್‌ ನಡಾಲ್‌ ಅವರು ತಮ್ಮ ಬಹುಕಾಲದ ಗೆಳತಿ ಜಿಸ್ಕಾ ಪರೆಲ್ಲೊ ಅವರನ್ನು ಶನಿವಾರ ವಿವಾಹವಾಗಿದ್ದಾರೆ.

33 ವರ್ಷದ ನಡಾಲ್‌ ಮತ್ತು 31ರ ಹರೆಯದ ಜಿಸ್ಕಾ ಅವರು 14 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಲಾ ಫೋರ್ಟಾಲೆಜಾದಲ್ಲಿ ನಡೆದ ಸಮಾರಂಭದಲ್ಲಿ ಕುಟುಂಬದವರು ಸೇರಿ 350 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ADVERTISEMENT

ನಡಾಲ್‌ ಅವರು ಗ್ರ್ಯಾನ್‌ಸ್ಲಾಮ್‌ನಲ್ಲಿ 19 ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಪರೆಲ್ಲೊ ಮತ್ತು ನಡಾಲ್‌ ಅವರ ತಂಗಿ ಮೇರಿಬೆಲ್‌ ‌ಬಾಲ್ಯದ ಸ್ನೇಹಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.