ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಆಟ ನುಂಗಿದ ನೋವು, ಸೆಮಿ ಫೈನಲ್‌ನಿಂದ ಹೊರ ನಡೆದ ನಡಾಲ್‌

ಏಜೆನ್ಸೀಸ್
Published 8 ಸೆಪ್ಟೆಂಬರ್ 2018, 4:39 IST
Last Updated 8 ಸೆಪ್ಟೆಂಬರ್ 2018, 4:39 IST
ಪಂದ್ಯದಿಂದ ಹೊರ ನಡೆದ ರಫೆಲ್‌ ನಡಾಲ್‌
ಪಂದ್ಯದಿಂದ ಹೊರ ನಡೆದ ರಫೆಲ್‌ ನಡಾಲ್‌   

ನ್ಯೂಯಾರ್ಕ್‌:ವಿಶ್ವ ನಂ.1 ಆಟಗಾರ ಸ್ಪೇನ್‌ನ ರಫೆಲ್‌ ನಡಾಲ್‌ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಿಂದ ಹೊರಗುಳಿದರು. ಮತ್ತೊಂದು ಪಂದ್ಯದಲ್ಲಿ ಜಪಾನ್‌ನ ಕೀ ನಿಶಿಕೋರಿ ವಿರುದ್ಧ ಸರ್ಬಿಯಾದ ನೊವಾಕ್ ಜೊಕೊವಿಚ್‌ ಗೆಲುವು ಸಾಧಿಸುವ ಮೂಲಕ ಫೈನಲ್‌ ಪ್ರವೇಶಿಸಿದ್ದಾರೆ.

ಅರ್ಜೆಂಟಿನಾದ ಜುವಾನ್ ಮಾರ್ಟಿನ್‌ ಡೆಲ್ ಪೊಟ್ರೊ ಎದುರು ಸೆಮಿ ಫೈನಲ್‌ ಸೆಣಸಾಟದಲ್ಲಿದ್ದ ನಡಾಲ್‌, 7–6, 6–2 ಪಾಯಿಂಟ್‌ಗಳ ಎರಡು ಗಂಟೆಗಳ ಹೋರಾಟದ ನಂತರ ಮೊಣಕಾಲು ಸಮಸ್ಯೆಯಿಂದ ಅನಿವಾರ್ಯವಾಗಿ ಆಟ ನಿಲ್ಲಿಸಿದರು.

’ಬಹಳ ನೋವು ಅನುಭವಿಸುತ್ತಿದ್ದೇನೆ. ಆಟ ಮುಂದುವರಿಸುವುದು ಅಸಾಧ್ಯವೆನಿಸಿದೆ’ ಎಂದು ನಡಾಲ್‌ ಪ್ರತಿಕ್ರಿಯಿಸಿದರು. ಇದು ಅವರ 18ನೇ ಗ್ರ್ಯಾನ್‌ ಸ್ಲಾಂ ಆಗಿತ್ತು. ಈ ಟೂರ್ನಿಯ ಮೂರನೇ ಪಂದ್ಯದಲ್ಲಿಯೂ ನಡಾಲ್‌ಗೆ ಗಾಯದ ಸಮಸ್ಯೆ ಅಡ್ಡಿ ಮಾಡಿತ್ತು. ನೋವಿನಿಂದ ಇದೇ ವರ್ಷ ಎರಡನೇ ಬಾರಿಗೆ ಗ್ರ್ಯಾನ್‌ ಸ್ಲಾಂನಿಂದ ಹೊರಗುಳಿದಿದ್ದಾರೆ.

ADVERTISEMENT

ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಜೊಕೊವಿಚ್‌ ಮತ್ತುಡೆಲ್ ಪೊಟ್ರೊ ಮುಖಾಮುಖಿಯಾಗಲಿದ್ದಾರೆ.

ಡೆಲ್‌ ಪೊಟ್ರೊ 9 ವರ್ಷಗಳ ಬಳಿಕ ಗ್ರ್ಯಾನ್‌ ಸ್ಲಾಂ ಫೈನಲ್ ಪ್ರವೇಶಿಸಿದ್ದಾರೆ. 2009ರಲ್ಲಿ ರೋಜರ್‌ ಫೆಡರ್‌ ಮಣಿಸುವ ಮೂಲಕ ಡೆಲ್‌ ಪೊಟ್ರೊ ಯುಎಸ್‌ ಓಪಲ್‌ ಫೈನಲ್‌ ಪ್ರವೇಶ ಪಡೆದಿದ್ದರು. ಜೊಕೊವಿಚ್‌ ತನ್ನ ಮೂರನೇ ಯುಎಸ್‌ ಓಪನ್‌ ಹಾಗೂ 14ನೇ ಗ್ರ್ಯಾನ್‌ ಸ್ಲಾಂ ಮುಡಿಗೇರಿಸಲು ಕಾತುರರಾಗಿದ್ದಾರೆ. ಮೊಣಕೈ ಸಮಸ್ಯೆಯಿಂದಾಗಿ ಜೊಕೊವಿಚ್‌ ಕಳೆದ ವರ್ಷದ ಟೂರ್ನಿಯಿಂದ ಹೊರಗುಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.