ADVERTISEMENT

ಫ್ರೆಂಚ್ ಓಪನ್ ಟೆನಿಸ್‌ ಅರ್ಹತಾ ಟೂರ್ನಿ: ಎರಡನೇ ಸುತ್ತಿಗೆ ರಾಮಕುಮಾರ್‌

ಫ್ರೆಂಚ್ ಓಪನ್ ಟೂರ್ನಿಯ ಅರ್ಹತಾ ಪಂದ್ಯಗಳು: ಪ್ರಜ್ಞೇಶ್ ಪರಾಭವ

ಪಿಟಿಐ
Published 25 ಮೇ 2021, 14:05 IST
Last Updated 25 ಮೇ 2021, 14:05 IST
ರಾಮಕುಮಾರ್ ರಾಮನಾಥನ್‌– ಪ್ರಜಾವಾಣಿ ಸಂಗ್ರಹ ಚಿತ್ರ
ರಾಮಕುಮಾರ್ ರಾಮನಾಥನ್‌– ಪ್ರಜಾವಾಣಿ ಸಂಗ್ರಹ ಚಿತ್ರ   

ಪ್ಯಾರಿಸ್‌: ಭಾರತದ ರಾಮಕುಮಾರ್ ರಾಮನಾಥನ್ ಅವರು ಫ್ರೆಂಚ್ ಓಪನ್ ಟೆನಿಸ್‌ ಅರ್ಹತಾ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಪ್ರಜ್ಞೇಶ್ ಗುಣೇಶ್ವರನ್ ಅವರಿಗೆ ಮೊದಲ ತಡೆ ದಾಟಲು ಸಾಧ್ಯವಾಗಲಿಲ್ಲ.

ಮೊದಲ ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡ ರಾಮಕುಮಾರ್‌ ಮೊದಲ ಸುತ್ತಿನಲ್ಲಿ 2–6, 7–6, 6–3ರಿಂದ ಅಮೆರಿಕದ ಮೈಕೆಲ್ ಮೊಹ್ ಸವಾಲು ಮೀರಿದರು. ಒಂದು ತಾಸು 54 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ಮುಂದಿನ ಪಂದ್ಯದಲ್ಲಿ ರಾಮಕುಮಾರ್ ಅವರಿಗೆ ಉಜ್ಬೆಕಿಸ್ತಾನದ ಅನುಭವಿ ಆಟಗಾರ ಡೆನಿಸ್ ಇಸ್ತೊಮಿನ್ ಸ್ಪರ್ಧೆ ಎದುರಾಗಿದೆ. ಇಸ್ತೊಮಿನ್ ಅವರು ಮೊದಲ ಸುತ್ತಿನಲ್ಲಿ ಬೊಸ್ನಿಯಾದ ಡ್ಯಾಮಿರ್ ಡಿಜುಮುರ್ ಅವರನ್ನು ಮಣಿಸಿದರು.

ADVERTISEMENT

ಎಡಗೈ ಆಟಗಾರ 32ನೇ ಶ್ರೇಯಾಂಕದ ಪ್ರಜ್ಞೇಶ್ ಅವರು ಮೊದಲ ಪಂದ್ಯದಲ್ಲಿ 2–6, 2–6ರಿಂದ ಜರ್ಮನಿಯ ಆಸ್ಕರ್ ಒಟ್ಟೆ ಎದುರು ಪರಾಭವಗೊಂಡರು. ಭಾರತದ ಇನ್ನೋರ್ವ ಆಟಗಾರ ಸುಮಿತ್ ನಗಾಲ್ (27ನೇ ಶ್ರೇಯಾಂಕ) ಅವರು ಮೊದಲ ಸುತ್ತಿನಲ್ಲಿ ರಾಬರ್ಟೊ ಮರ್ಕೊರಾ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.