ADVERTISEMENT

ಐಟಿಎಫ್‌ ವಿಶ್ವ ಮಹಿಳಾ ಟೆನಿಸ್ ಟೂರ್ ಚಾಂಪಿಯನ್‌ಷಿಪ್: ಎರಡನೇ ಸುತ್ತಿಗೆ ಲಾಲಿತ್ಯ

ಐಟಿಎಫ್‌ ವಿಶ್ವ ಮಹಿಳಾ ಟೆನಿಸ್‌ ಟೂರ್‌ ಚಾಂಪಿಯನ್‌ಷಿಪ್‌: ಸಿಂಗ್ಲಾ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 19:45 IST
Last Updated 28 ನವೆಂಬರ್ 2021, 19:45 IST

ಬೆಂಗಳೂರು: ನಾಲ್ಕನೇ ಹಾಗೂ ಆರನೇ ಶ್ರೇಯಾಂಕದ ಆಟಗಾರ್ತಿಯರಿಗೆ ಆಘಾತ ನೀಡಿದ ರೆನ್ನೆ ಸಿಂಗ್ಲಾ ಹಾಗೂ ಲಾಲಿತ್ಯ ಕಲ್ಲೂರಿ ಅವರು ಐಟಿಎಫ್‌ ವಿಶ್ವ ಮಹಿಳಾ ಟೆನಿಸ್‌ ಟೂರ್‌ ಚಾಂಪಿಯನ್‌ಷಿಪ್‌ ಅರ್ಹತಾ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ರೆನ್ನೆ 6-4, 7-5ರಿಂದ ನಾಲ್ಕನೇ ಸ್ಮೃತಿ ಭಾಸಿನ್ ಅವರನ್ನು ಮಣಿಸಿದರು. 17 ವರ್ಷದ ಆಟಗಾರ್ತಿ ರೆನ್ನೆ ಹರಿಯಾಣದವರು.

ಇನ್ನೊಂದು ಹಣಾಹಣಿಯಲ್ಲಿ ಮಹಾರಾಷ್ಟ್ರದ ಲಾಲಿತ್ಯ 6-1, 2-6, 10-6ರಿಂದ ಆರನೇ ಶ್ರೇಯಾಂಕದ ನಿದಿತ್ರಾ ರಾಜ್‌ಮೋಹನ್ ಎದುರು ಗೆದ್ದು ಬೀಗಿದರು. ಮೊದಲ ಸೆಟ್‌ ಸುಲಭವಾಗಿ ಗೆದ್ದ ಲಾಲಿತ್ಯ ಅವರಿಗೆ ನಿದಿತ್ರಾ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ನಿರ್ಣಾಯಕ ಸೆಟ್‌ಅನ್ನು ಸುಲಭವಾಗಿ ಗೆದ್ದ ಲಾಲಿತ್ಯ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ADVERTISEMENT

ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಚಂದನಾ ಪೋತುಗರಿ 6-2, 6-4ರಿಂದ ಶ್ರೇಯಾ ತಟವರ್ತಿ ಎದುರು, ಸೋನಾಷೆ ಭಟ್ನಾಗರ್‌ 6-2, 6-3ರಿಂದ ಹೃದಯೇಶಿ ಪೈ ವಿರುದ್ಧ, ಸಾಯಿ ಸ್ಮಿತಾ 6-1, 6-3ರಿಂದ ಕೃತಿ ತೋಮರ್ ಎದುರು, ಪೂಜಾ ಇಂಗಳೆ 6–0, 6–4ರಿಂದ ಆವಿಷ್ಕಾ ಗುಪ್ತಾ ವಿರುದ್ಧ, ಪ್ರತಿಭಾ ನಾರಾಯಣ್ ಪ್ರಸಾದ್‌ 6–1, 6–0ರಿಂದ ರಾಧಿಕಾ ಯಾದವ್‌ ವಿರುದ್ಧ ಜಯ ಗಳಿಸಿದರು. ಯಶಿಕಾ ವೇಣು 6–2, 2–6, 10–8ರಿಂದ ಪಿ. ಮೇಘನಾ ಎದುರು, ಪ್ರತ್ಯೂಷಾ ರಾಚಪುಡಿ 6-0, 6-1ರಿಂದ ಶಿಲ್ಪಾ ಸ್ವರೂಪಾ ದಾಸ್‌ ಎದುರು ಗೆಲುವು ಸಾಧಿಸಿದರು.

ಎರಡನೇ ಸುತ್ತಿನಲ್ಲಿ ಜಯ ಗಳಿಸಿದ ಆಟಗಾರ್ತಿಯರು, ಮಂಗಳವಾರ ಆರಂಭವಾಗಲಿರುವ ಚಾಂಪಿಯನ್‌ಷಿಪ್‌ನ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.