ADVERTISEMENT

ಫೆಡ್‌ ಕಪ್‌ ತಂಡಕ್ಕೆ ಮರಳಿದ ಸಾನಿಯಾ

ಐವರು ಆಟಗಾರ್ತಿಯರ ತಂಡಕ್ಕೆ ಆಂಕಿತಾ ಭಾಂಬ್ರಿ ಕೋಚ್‌

ಪಿಟಿಐ
Published 25 ಡಿಸೆಂಬರ್ 2019, 11:43 IST
Last Updated 25 ಡಿಸೆಂಬರ್ 2019, 11:43 IST

ನವದೆಹಲಿ : ಡಬಲ್ಸ್‌ ಆಟಗಾರ್ತಿ ಸಾನಿಯಾ ಮಿರ್ಜಾ, ನಾಲ್ಕು ವರ್ಷಗಳ ನಂತರ ಭಾರತದ ಫೆಡರೇಷನ್‌ ಕಪ್‌ ತಂಡಕ್ಕೆ ಮರಳಿದ್ದಾರೆ. ಐವರು ಆಟಗಾರ್ತಿಯರ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.

ದೇಶದ ಅಗ್ರಮಾನ್ಯ ಆಟಗಾರ್ತಿ ಅಂಕಿತಾ ರೈನಾ (180ನೇ ಕ್ರಮಾಂಕ), ರಿಯಾ ಭಾಟಿಯಾ (379), ರುತುಜಾ ಭೋಂಸ್ಲೆ (466) ಮತ್ತು ಕರ್ಮನ್‌ ಕೌರ್‌ ತಂಡಿ (568) ಅವರು ಈ ತಂಡದಲ್ಲಿರುವ ಇತರ ಆಟಗಾರ್ತಿಯರು. ಸಾನಿಯಾ 2016ರಲ್ಲಿ ಕೊನೆಯ ಬಾರಿ ಫೆಡ್‌ ಕಪ್‌ ತಂಡದಲ್ಲಿ ಆಡಿದ್ದರು. ಕುಟುಂಬದ ಜೊತೆ ಕಳೆಯುವ ಉದ್ದೇಶದಿಂದ ನಂತರ ಆಡಿರಲಿಲ್ಲ.

ಡೇವಿಸ್‌ ಕಪ್‌ ಮಾಜಿ ಆಟಗಾರ ವಿಶಾಲ್‌ ಉಪ್ಪಳ್ ತಂಡದ ನಾಯಕರಾಗಿದ್ದಾರೆ. ಹಿರಿಯ ಆಟಗಾರ್ತಿ ಅಂಕಿತಾ ಭಾಂಬ್ರಿ ಕೋಚ್‌ ಆಗಿದ್ದಾರೆ. ಸೌಜನ್ಯಾ ಬಾವಿಸೆಟ್ಟಿ ರಿಸರ್ವ್‌ ಆಟಗಾರ್ತಿಯಾಗಿದ್ದಾರೆ.

ADVERTISEMENT

ದೀರ್ಘ ವಿಶ್ರಾಂತಿಗೆ ಮೊದಲು ಸಾನಿಯಾ, ಆರು ಡಬಲ್ಸ್‌ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಇದರಲ್ಲಿ ಮೂರು ಮಿಕ್ಸೆಡ್‌ ಡಬಲ್ಸ್‌ ಒಳಗೊಂಡಿದ್ದವು.

ಹೋಬಾರ್ಟ್‌ ಇಂಟರ್‌ನ್ಯಾಷನಲ್‌ ಟೂರ್ನಿಯಲ್ಲಿ ಉಕ್ರೇನ್‌ನ ನಾಡಿಯಾ ಕಿಚೆನೊಕ್‌ ಜೊತೆ ಆಡುವ ಮೂಲಕ ಸಾನಿಯಾ ಸಕ್ರಿಯ ಟೆನಿಸ್‌ಗೆ ಮರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.