ADVERTISEMENT

ಎರಡನೇ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ: ಯುಕ್ತಾ, ಸಾತ್ವಿಕ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 20:40 IST
Last Updated 29 ಜೂನ್ 2025, 20:40 IST
<div class="paragraphs"><p>ಪ್ರಶಸ್ತಿಯೊಂದಿಗೆ (ಎಡದಿಂದ) ಸಾತ್ವಿಕ್‌ ಎಂ, ಸಾಕ್ಷ್ಯಾ ಸಂತೋಷ್‌, ಅರ್ಣವ್‌ ಮಿಥುನ್‌ ಮತ್ತು ಯುಕ್ತಾ ಹರ್ಷಾ</p></div>

ಪ್ರಶಸ್ತಿಯೊಂದಿಗೆ (ಎಡದಿಂದ) ಸಾತ್ವಿಕ್‌ ಎಂ, ಸಾಕ್ಷ್ಯಾ ಸಂತೋಷ್‌, ಅರ್ಣವ್‌ ಮಿಥುನ್‌ ಮತ್ತು ಯುಕ್ತಾ ಹರ್ಷಾ

   

ಬೆಂಗಳೂರು: ಯುಕ್ತಾ ಹರ್ಷ ಮತ್ತು ಸಾತ್ವಿಕ್ ಎಂ. ಅವರು ಕೆಜಿಎಸ್‌ ಕ್ಲಬ್‌ ಆಶ್ರಯದಲ್ಲಿ ಭಾನುವಾರ ನಡೆದ ಎರಡನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನವರ ಬಾಲಕಿಯರ ಮತ್ತು ಬಾಲಕರ ಸಿಂಗಲ್ಸ್‌ ಪ್ರಶಸ್ತಿ ಗೆದ್ದರು. 

ಬಾಲಕಿಯರ ಸಿಂಗಲ್ಸ್‌ ಫೈನಲ್‌ ನಲ್ಲಿ ಯುಕ್ತಾ 13-11, 11-5, 11-5ರಿಂದ ಕ್ರಿಶ್‌ ಪಿ. ಕರ್ಕೇರ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಕ್ರಿಶ್‌ 11-6, 11-6, 11-6ರಿಂದ ಮಹಿಕಾ ಆರ್‌. ಉಡುಪ ವಿರುದ್ಧ; ಯುಕ್ತಾ 11-9, 5-11, 11-4, 9-11, 11-7ರಿಂದ ಸಾಕ್ಷ್ಯಾ ಸಂತೋಷ್‌ ವಿರುದ್ಧ ಗೆಲುವು ಸಾಧಿಸಿದ್ದರು. 

ADVERTISEMENT

ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಸಾತ್ವಿಕ್‌ 11-3, 13-11, 11-4ರಿಂದ  ಅರ್ಣವ್‌ ಮಿಥುನ್ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದಲ್ಲಿ ಸಾತ್ವಿಕ್‌ 9-11, 11-5, 11-2, 11-8ರಿಂದ ಸುಚೇತ್‌ ಸಿ. ಧರೆನ್ನವರ ಎದುರು; ಅರ್ಣವ್‌ 11-6, 6- 11, 11-9, 12-10ರಿಂದ ಅಂಕುಶ್‌ ಬಾಳಿಗಾ ಎದುರು ಜಯ ಸಾಧಿಸಿದ್ದರು.

ಹೋಪ್ಸ್‌ ಬಾಲಕರ ಫೈನಲ್‌ನಲ್ಲಿ ಅರ್ಣವ್‌ 13-15, 15-13, 11-5, 11-9ರಿಂದ ಶರ್ವಿಲ್ ಕರಂಬೇಲ್ಕರ ವಿರುದ್ಧ ಗೆದ್ದರು. ಸೆಮಿಫೈನಲ್‌ ನಲ್ಲಿ ಅರ್ಣವ್‌  11-6, 11-5, 11-9ರಿಂದ ಧ್ರುವ್ ಮುಂಜಿ ವಿರುದ್ಧ; ಶರ್ವಿಲ್‌ 13-11, 11-8, 11-6ರಿಂದ ರೋಹನ್‌ ಅರ್ಜುನ್‌ ವಿರುದ್ಧ ಜಯಿಸಿದ್ದರು. 

ಹೋಪ್ಸ್‌ ಬಾಲಕಿಯರ ಫೈನಲ್‌ನಲ್ಲಿ ಸಾಕ್ಷ್ಯಾ ಸಂತೋಷ್‌ 11-5, 6-11, 11-4, 11-7ರಿಂದ ತಮನ್ನಾ ನೇರ್ಲಾಜೆ ಅವರನ್ನು ಮಣಿಸಿದರು. ನಾಲ್ಕರ ಘಟ್ಟ ದಲ್ಲಿ ಸಾಕ್ಷ್ಯಾ 11-1, 11-7, 11-4ರಿಂದ ತನ್ವಿ ಸಿಂಹ ವಿರುದ್ಧ; ತಮನ್ನಾ 11-5, 11-4, 7-11, 12-10ರಿಂದ ನಂದನಾ ಬಂಡಿ ವಿರುದ್ಧ ಜಯ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.