ADVERTISEMENT

ಆಸ್ಟ್ರೇಲಿಯಾ ಓಪನ್‌ಗೂ ಮುನ್ನ ಪ್ರದರ್ಶನ ಪಂದ್ಯಗಳ ಟೂರ್ನಿ

ರಾಯಿಟರ್ಸ್
Published 9 ಜನವರಿ 2021, 12:58 IST
Last Updated 9 ಜನವರಿ 2021, 12:58 IST
ಆಸ್ಟ್ರೇಲಿಯಾ ಓಪನ್
ಆಸ್ಟ್ರೇಲಿಯಾ ಓಪನ್   

ಮೆಲ್ಬರ್ನ್‌: ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಗೆ ಪೂರ್ವಭಾವಿಯಾಗಿ ಸಿಟಿ ಮೆಮೋರಿಯಲ್ ಡ್ರೈವ್ ಟೆನಿಸ್ ಸೆಂಟರ್‌ನಲ್ಲಿ ಇದೇ 29ರಂದು ಪ್ರದರ್ಶನ ಪಂದ್ಯಗಳು ನಡೆಯಲಿವೆ ಎಂದು ಟೆನಿಸ್ ಆಸ್ಟ್ರೇಲಿಯಾ ಶನಿವಾರ ತಿಳಿಸಿದೆ. ಪಂದ್ಯಗಳಲ್ಲಿ ಸೆರೆನಾ ವಿಲಿಯಮ್ಸ್, ನವೊಮಿ ಒಸಾಕ, ರಫೆಲ್ ನಡಾಲ್, ನೊವಾಕ್ ಜೊಕೊವಿಚ್, ಆ್ಯಶ್ಲಿ ಬಾರ್ಟಿ, ಸಿಮೋನಾ ಹಲೆಪ್, ಡೊಮಿನಿಕ್ ಥೀಮ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದೂ ಅದು ತಿಳಿಸಿದೆ.

ಆಸ್ಟ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಳ್ಳಲು ಬರುವವರ ಕ್ವಾರಂಟೈನ್‌ ಅವಧಿ ಮುಗಿದ ಕೂಡಲೇ ‘ಎ ಡೇ ಅಟ್ ದಿ ಡ್ರೈವ್’ ಎಂಬ ಹೆಸರಿನಲ್ಲಿಈ ಪಂದ್ಯಗಳು ನಡೆಯಲಿದೆ. ಇದಾಗಿ ಒಂದು ವಾರದ ನಂತರ ಮೆಲ್ಬರ್ನ ಪಾರ್ಕ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ನಡೆಯಲಿದೆ. ಟೂರ್ನಿಯ ನಂತರ ಅಡಿಲೇಡ್‌ನಲ್ಲಿ ಡಬ್ಲ್ಯುಟಿಎ ಟೂರ್ 500 ಟೂರ್ನಿ ಆಯೋಜಿಸುವುಕ್ಕೂ ಟೆನಿಸ್ ಆಸ್ಟ್ರೇಲಿಯಾ ಮುಂದಾಗಿದೆ.

ನೂರಾರು ಆಟಗಾರರು ಮತ್ತು ಸಿಬ್ಬಂದಿ ಇದೇ 15ರಿಂದ ಆಸ್ಟ್ರೇಲಿಯಾಕ್ಕೆ ಬರಲಿದ್ದು ಕೋವಿಡ್‌–19ಕ್ಕೆ ಸಂಬಂಧಿಸಿದ ಆರೋಗ್ಯ ಶಿಷ್ಟಾಚಾರದ ಭಾಗವಾಗಿ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗುವರು. ಈ ಸಂದರ್ಭದಲ್ಲಿ ಅಭ್ಯಾಸಕ್ಕಾಗಿ ಕೇವಲ ಐದು ತಾಸು ಹೋಟೆಲ್‌ನಿಂದ ಹೊರಗೆ ಹೋಗಲು ಅವಕಾಶ ಇರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.