ADVERTISEMENT

ಸ್ಪೇನ್‌ಗೆ ಡೇವಿಸ್‌ ಕಪ್‌ ಗರಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:31 IST
Last Updated 25 ನವೆಂಬರ್ 2019, 19:31 IST
ಡೇವಿಸ್‌ ಕಪ್‌ ಟ್ರೋಫಿಯೊಂದಿಗೆ ಸ್ಪೇನ್‌ ಆಟಗಾರರ ಸಂಭ್ರಮ –ರಾಯಿಟರ್ಸ್‌ ಚಿತ್ರ
ಡೇವಿಸ್‌ ಕಪ್‌ ಟ್ರೋಫಿಯೊಂದಿಗೆ ಸ್ಪೇನ್‌ ಆಟಗಾರರ ಸಂಭ್ರಮ –ರಾಯಿಟರ್ಸ್‌ ಚಿತ್ರ   

ಮ್ಯಾಡ್ರಿಡ್‌ (ಎಎಫ್‌ಪಿ): ರಫೆಲ್‌ ನಡಾಲ್‌ ಮತ್ತು ರಾಬರ್ಟೊ ಬಟಿಸ್ಟಾ ಅಗತ್‌ ಅವರ ಆಕರ್ಷಕ ಆಟದ ಬಲದಿಂದ ಸ್ಪೇನ್‌ ತಂಡ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ.

ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಸ್ಪೇನ್‌ 2–0ಯಿಂದ ಕೆನಡಾ ತಂಡವನ್ನು ಮಣಿಸಿತು. ಇದರೊಂದಿಗೆ ಡೇವಿಸ್‌ ಕಪ್‌ನಲ್ಲಿ ಆರನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.

ಮೊದಲ ಸಿಂಗಲ್ಸ್‌ನಲ್ಲಿ ರಾಬರ್ಟೊ ಬಟಿಸ್ಟಾ 7–6, 6–3ರಲ್ಲಿ ಫೆಲಿಕ್ಸ್‌ ಅಗರ್‌ ಅಲಿಯಾಸಿಮ್‌ ಅವರನ್ನು ಸೋಲಿಸಿದರು.

ADVERTISEMENT

ಎರಡನೇ ಸಿಂಗಲ್ಸ್‌ನಲ್ಲಿ ನಡಾಲ್‌ 6–3, 7–6ರಲ್ಲಿ ಡೆನಿಸ್‌ ಶಪೋವಲೊವ್‌ ಎದುರು ಗೆದ್ದು ತವರಿನ ಅಭಿಮಾನಿಗಳ ಖುಷಿಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.