ADVERTISEMENT

ಟೇಬಲ್ ಟೆನಿಸ್‌ ಟೂರ್ನಿ | ಅಥರ್ವ, ಹಿಮಾಂಶಿ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 0:23 IST
Last Updated 29 ಸೆಪ್ಟೆಂಬರ್ 2025, 0:23 IST
(ಎಡದಿಂದ) ಪ್ರಶಸ್ತಿಯೊಂದಿಗೆ ಅಮನ್‌ ಜಾರ್ಜ್‌ ಥಾಮಸ್‌, ಲಕ್ಷ್ಮಿ ಆಶ್ರಿತಾ, ಅಥರ್ವ ನವರಂಗೆ ಹಾಗೂ ಹಿಮಾಂಶಿ ಚೌಧರಿ
(ಎಡದಿಂದ) ಪ್ರಶಸ್ತಿಯೊಂದಿಗೆ ಅಮನ್‌ ಜಾರ್ಜ್‌ ಥಾಮಸ್‌, ಲಕ್ಷ್ಮಿ ಆಶ್ರಿತಾ, ಅಥರ್ವ ನವರಂಗೆ ಹಾಗೂ ಹಿಮಾಂಶಿ ಚೌಧರಿ    

ಬೆಂಗಳೂರು: ಅಥರ್ವ ನವರಂಗೆ ಹಾಗೂ ಹಿಮಾಂಶಿ ಚೌಧರಿ ಅವರು ಬಿಎಂಎಸ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್‌ ಟೂರ್ನಿಯ 17 ವರ್ಷದೊಳಗಿವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಜೆಟಿಟಿಎ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯ 17 ವರ್ಷದೊಳಗಿವರ ಬಾಲಕರ ವಿಭಾಗದ ಫೈನಲ್‌ನಲ್ಲಿ ಸಿದ್ಧಾಂತ್‌ 11–8, 11–9, 11–7ರಿಂದ ನೇರ ಸೆಟ್‌ಗಳಲ್ಲಿ ಶುಭಂ ತ್ರಿವೇದಿ ಅವರನ್ನು ಮಣಿಸಿದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಶುಭಂ ಅವರು 11–8, 11–6, 13–11ರಿಂದ ರೇಯಾನ್ಶ್‌ ಜಲನ್‌ ಎದುರು; ಅಥರ್ವ 11–9, 11–9, 11–9ರಿಂದ ಆರ್ಯ ಜೈನ್‌ ಎದುರು ಗೆಲುವು ಸಾಧಿಸಿದ್ದರು.

ADVERTISEMENT

17 ವರ್ಷದೊಳಗಿವರ ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಹಿಮಾಂಶಿ 11–13, 11–9, 11–4, 11–7ರಿಂದ ಹಿಯಾ ಸಿಂಗ್‌ ಅವರನ್ನು ಪರಾಭವಗೊಳಿಸಿದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಹಿಮಾಂಶಿ ಅವರು 11–4, 11–5, 10–12, 11–5ರಿಂದ ಶಿವಾನಿ ಮಹೇಂದ್ರನ್‌ ವಿರುದ್ಧ; ಹಿಯಾ 11–9, 11–8, 11–2ರಿಂದ ಸುಮೇಧಾ ಭಟ್‌ ವಿರುದ್ಧ ಜಯ ಸಾಧಿಸಿದ್ದರು.

ಲಕ್ಷ್ಮಿ ಆಶ್ರಿತಾ ಚಾಂಪಿಯನ್‌: 15 ವರ್ಷದೊಳಗಿವರ ಬಾಲಕಿಯರ ವಿಭಾಗದಲ್ಲಿ ಲಕ್ಷ್ಮಿ ಆಶ್ರಿತಾ ಅವರು 2–11, 11–8, 11–9, 6–11, 11–9ರಿಂದ ಮಿಹಿಕಾ ಉಡುಪ ಅವರನ್ನು ಮಣಿಸಿ ಚಾಂಪಿಯನ್‌ ಆದರು. ಬಾಲಕರ ವಿಭಾಗದಲ್ಲಿ ಅಮನ್‌ ಜಾರ್ಜ್‌ ಥಾಮಸ್‌ ಅವರು 11–9, 11–9, 12–10ರಿಂದ ವೇದಾಂತ್‌ ವಸಿಷ್ಠ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.