ಬರ್ಲಿನ್: 12 ದಿನಗಳ ಹಿಂದೆ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿ ಕೊಂಡ ಅಮೆರಿಕದ ಕೊಕೊ ಗಾಫ್ ಅವರು ಇಲ್ಲಿ ನಡೆಯುತ್ತಿರುವ ಜರ್ಮನ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಆಘಾತ ಅನುಭವಿಸಿದರು.
ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಎರಡನೇ ಶ್ರೇಯಾಂಕದ ಗಾಫ್ 6-2, 7-6 (8/6)ರಿಂದ ಚೀನಾದ ಕ್ವಾಲಿಫೈಯರ್ ಆಟಗಾರ್ತಿ ವಾಂಗ್ ಕ್ಸಿನ್ಯು ವಿರುದ್ಧ ಮುಗ್ಗರಿಸಿದರು.
ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ (ಬೆಲರೂಸ್) ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.