ADVERTISEMENT

ಟೆನಿಸ್‌: ಭಾರತಕ್ಕೆ ಜಯ

ಪಿಟಿಐ
Published 7 ಫೆಬ್ರುವರಿ 2019, 20:12 IST
Last Updated 7 ಫೆಬ್ರುವರಿ 2019, 20:12 IST

ಅಸ್ತಾನ, ಕಜಕಸ್ತಾನ: ಅಂಕಿತಾ ರೈನಾ ಅವರ ಮಿಂಚಿನ ಆಟದ ನೆರವಿನಿಂದ ಭಾರತ ತಂಡ ಫೆಡ್‌ ಕಪ್‌ ಟೆನಿಸ್‌ ಏಷ್ಯಾ ಒಸೀನಿಯಾ ಗುಂಪು–1 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಗೆದ್ದಿದೆ.

ಗುರುವಾರ ನಡೆದ ಹಣಾಹಣಿಯಲ್ಲಿ ಭಾರತ 2–1ರಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ಕರ್ಮನ್‌ಕೌರ್‌ ಥಾಂಡಿ 2–6, 6–3, 3–6ರಲ್ಲಿ ನುಡಿಂದಾ ಲುವಾಂಗಮ್‌ ಎದುರು ಆಘಾತ ಕಂಡರು.

ADVERTISEMENT

ಎರಡನೇ ಸಿಂಗಲ್ಸ್‌ನಲ್ಲಿ ಅಂಕಿತಾ 6–7, 6–2, 6–4ರಲ್ಲಿ ಪೀಂಗ್‌ತರನ್‌ ಪ್ಲಿಪುಯೆಚ್‌ ಅವರನ್ನು ಮಣಿಸಿದರು.

ಡಬಲ್ಸ್‌ನಲ್ಲಿ ಅಂಕಿತಾ ಮತ್ತು ಕರ್ಮನ್‌ 6–4, 6–7, 7–5ರಲ್ಲಿ ಪೀಂಗ್‌ತರನ್‌ ಮತ್ತು ನುಡಿಂದಾ ಅವರನ್ನು ಸೋಲಿಸಿ ಭಾರತದ ಖುಷಿಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.