ADVERTISEMENT

ಟೆನಿಸ್: ಬಿಯಾಂಕ ಚಾಂಪಿಯನ್‌

ಏಜೆನ್ಸೀಸ್
Published 18 ಮಾರ್ಚ್ 2019, 19:14 IST
Last Updated 18 ಮಾರ್ಚ್ 2019, 19:14 IST
ಬಿಯಾಂಕ ಆ್ಯಂಡ್ರಿಸ್ಕು –ಎಎಫ್‌ಪಿ ಚಿತ್ರ
ಬಿಯಾಂಕ ಆ್ಯಂಡ್ರಿಸ್ಕು –ಎಎಫ್‌ಪಿ ಚಿತ್ರ   

ಇಂಡಿಯಾನಾ ವೆಲ್ಸ್‌: ವಿಂಬಲ್ಡನ್‌ ಚಾಂಪಿಯನ್‌ ಏಂಜಲಿಕ್ ಕೆರ್ಬರ್ ಅವರನ್ನು ಮಣಿಸಿದ ಕೆನಡಾದ ಬಿಯಾಂಕ ಆ್ಯಂಡ್ರಿಸ್ಕು ಅವರು ಇಂಡಿಯಾನಾ ವೆಲ್ಸ್‌ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದರು.

ಭಾನುವಾರ ರಾತ್ರಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಬಿಯಾಂಕ 6–4, 3–6, 6–4ರಲ್ಲಿ ಗೆದ್ದರು. ಈ ಮೂಲಕ ವೈಲ್ಡ್ ಕಾರ್ಡ್‌ ಪ್ರವೇಶ ಪಡೆದ ಆಟಗಾರ್ತಿಯೊಬ್ಬರು ಮೊದಲ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಜರ್ಮನಿ ಆಟಗಾರ್ತಿ ಏಂಜಲಿಕ್‌ ಮೊದಲ ಸೆಟ್‌ನಲ್ಲಿ ಹೋರಾಡಿ ಸೋತರು.

ADVERTISEMENT

ಆದರೆ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಮೂರನೇ ಸೆಟ್‌ನಲ್ಲಿ ಇಬ್ಬರೂ ಜಿದ್ದಾಜಿದ್ದಿಯ ಆಟವಾಡಿದರು. ಕೊನೆಗೆ ಬಿಯಾಂಕ ಮೇಲುಗೈ ಸಾಧಿಸಿದರು.

ಟೂರ್ನಿಗೆ ಬರುವ ಮುನ್ನ ವಿಶ್ವ ರ‍್ಯಾಂಕಿಂಗ್‌ನಲ್ಲಿ 60ನೇ ಸ್ಥಾನ ಹೊಂದಿದ್ದ ಬಿಯಾಂಕ ಈಗ 24ನೇ ಸ್ಥಾನಕ್ಕೇರಲಿದ್ದಾರೆ. ಡಬ್ಲ್ಯುಟಿಎ ಟೂರ್ನಿಯೊಂದರಲ್ಲಿ ಅವರು ಗೆದ್ದ ಮೊದಲ ಪ್ರಶಸ್ತಿಯಾಗಿದೆ.

ಫೆಡರರ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್‌ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಅವರನ್ನು 3–6, 6–3, 7–5ರಿಂದ ಮಣಿಸಿ ಪ್ರಶಸ್ತಿ ಗೆದ್ದರು. ಇದರೊಂದಿಗೆ ದಾಖಲೆಯ ಆರನೇ ಪ್ರಶಸ್ತಿ ಗೆಲ್ಲುವ ಫೆಡರ್‌ ಕನಸು ನುಚ್ಚುನೂರಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.